ಸಿದ್ದಾಪುರ : ಜಮೀನಿನ ಬೇಲಿಯ ವಿಷಯವಾಗಿ ಉಂಟಾದ ತಕರಾರನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಡ ಘಟನೆ ತಾಲೂಕಿನ ದೊಡ್ಮನೆ ಸಮೀಪದ ಬಳೂರ್’ನಲ್ಲಿ ನಡೆದಿದೆ. ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಗಣಪತಿ ಗಿಡ್ಡಾ ಗೌಡ(56) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ.
ರವಿವಾರ ಮನೆಯಿಂದ ಸೊಪ್ಪು ತರಲೆಂದು ಬೆಟ್ಟಕ್ಕೆ ಹೋಗುವುದಾಗಿ ಹೇಳಿ ಹೊದವನು ಮನೆಯಿಂದ ಸ್ವಲ್ಪ ದೂರದಲ್ಲಿನ ಬೆಟ್ಟದಲ್ಲಿರುವ ಮರದ ಟೊಂಗೆಗೆ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.