ಸಿದ್ದಾಪುರ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ಮಾಯ ಶ್ರೀ ಶಾರದಾಪೀಠಂ ಶೃಂಗೇರಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಆಶೀರ್ವಾದ ಅನುಜ್ಞೆಯೊಂದಿಗೆ ಸಿದ್ದಾಪುರ ಶ್ರೀ ಶೃಂಗೇರಿ ಶಂಕರ ಮಠದಲ್ಲಿ 2022 ರ ಶ್ರೀ ಶರನ್ನವರಾತ್ರಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ಆರಂಭವಾಗಲಿದೆ. ಸೆ. 25, ಭಾನುವಾರ ಭಾದ್ರಪದ ಬಹುಳ ಅಮಾವಾಸ್ಯೆ ಶ್ರೀ ಗಣಪತಿ ಶ್ರೀ ಶಾರದಾ ಅಮ್ಮನವರಿಗೆ ಫಲಪಂಚಾಮೃತ ಅಭಿಷೇಕ. ಸರ್ವಾಭರಣ ಅಲಂಕಾರ ಸಹಿತ ಪೂಜೆ. ಸೆ. 26 ಸೋಮವಾರ ಶ್ರೀ ಶರನ್ನವರಾತ್ರಿ ಪ್ರಾರಂಭ ಶ್ರೀ ಶಾರದಾಂಬೆ ಸನ್ನಿಧಿಯಲ್ಲಿ ಚಂಡೀಪಾರಾಯಣ ಶ್ರೀ ಗಣಪತಿ ಸನ್ನಿಧಿಯಲ್ಲಿ ಉಪನಿಷತ್ ಪಾರಾಯಣ ವಿಜಯದಶಮೀ ವರೆಗೆ ಪ್ರತಿನಿತ್ಯ ನಡೆಯಲಿದೆ.
ವಿಶೇಷ ಪೂಜೆ ಸೆ.27 ಮಂಗಳವಾರ ಬಿದಿಗೆ ಲಲತಾ ಸಹಸ್ರನಾಮ ಹೋಮ ಸೆ. 28 ಬುಧವಾರ ತದಿಗೆ ರುದ್ರಹೋಮ, 29 ಗುರುವಾರ ಚತುರ್ಥಿಅಥರ್ವಶೀರ್ಷ ಹವನ, 30 ಶುಕ್ರವಾರ ಪಂಚಮೀ ಲಲತಾ ಪಂಚಮೀ ಚಂಡೀಹವನ ಅ.1 ಶನಿವಾರ ದುರ್ಗಾ ಹವನ, ಬೆಳಗ್ಗೆ 11.00 ರಿಂದ ಭಜನೆ ಶ್ರೀ ಲಲಿತಾಂಬಾ ಮತ್ತು ಶ್ರೀಮಾತಾ ಸ್ವಸಹಾಯ ಸಂಘ ವಾನಳ್ಳಿ ಇವರಿಂದ ನಡೆಯಲಿದೆ. 2 ಭಾನುವಾರ ಶಾರದಾಪೂಜೆ ಸಪ್ತಮೀ ಶಾರದಾಪೂಜೆ 3 ಸೋಮವಾರ ಅಷ್ಟಮೀ ಶ್ರೀ ದುರ್ಗಾಷ್ಟಮೀ 4ಮಂಗಳವಾರ ನವಮೀ, 5 ಬುಧವಾರ ದಶಮೀ ವಿಜಯದಶಮೀ ಪಲ್ಲಕ್ಕಿ ಉತ್ಸವ ಸಂಪನ್ನ ಗೊಳ್ಳಲಿದೆ. ಸೆ. 26,27,28,29 ಮತ್ತು ಅ. 5 ರಂದು ಪ್ರತಿ ದಿನ ಸಂಜೆ 6.30 ರಿಂದ ಸಂಸ್ಕೃತಿ ಸಂಪದೋತ್ಸವ “ನಂಗೀತ-ನಾಟಕ-ಯಕ್ಷಗಾನ” ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಪಾರಾಯಣ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಅಲಂಕಾರ ಸಹಿತ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ.