ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೆ. 13ರಂದು ಅಂಗಾರಕ ಸಂಕಷ್ಟಿ ನಿಮಿತ್ತ ಅಷ್ಟನಾರಿಕೇಳ ಗಣಹವನ, ಲಕ್ಷ ದೂರ್ವಾರ್ಚನೆ ಮತ್ತು ಸ್ವರ್ಣಗೌರಿ ದೇವಾಲಯದಲ್ಲಿ ಲಲಿತಾ ಸಹಸ್ರನಾಮದೊಂದಿಗೆ ಸುಹಾಸಿನಿಯರಿಂದ ಕುಂಕುಮಾರ್ಚನೆ ನಡೆಯಲಿದೆ. ಕುಂಕುಮಾರ್ಚನೆಗೆ ಕುಂಕುಮವನ್ನು ದೇವಾಲಯದಿಂದಲೇ ಪೂರೈಸಲಾಗುವುದು ಮತ್ತು ದೂರ್ವೆಯನ್ನು ನೂರರಂತೆ ಕಟ್ಟು ಮಾಡಿ ಸೆ. 12ರ ಸಾಯಂಕಲದೊಳಗೆ ದೇವಸ್ಥಾನಕ್ಕೆ ತಲುಪಿಸಲು ತಿಳಿಸಲಾಗಿದೆ