ಶಿರಸಿ: ಕಳೆದ ಜುಲೈ 13 ವ್ಯಾಸ ಪೂರ್ಣಿಮೆಯಿಂದ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಂಕಲ್ಪಿಸಿದ 32ನೇ ಚಾತುರ್ಮಾಸ್ಯದ ವ್ರತವನ್ನು ಶನಿವಾರ ಪೂರ್ಣಗೊಳಿಸಿ ಸೀಮೋಲ್ಲಂಘನಗೊಳಿಸಿದರು.
ನಿತ್ಯ ಜಪ, ಅನುಷ್ಠಾನ, ಪೂಜೆಯ ಜೊತೆ ಶಿಷ್ಯರಿಗೂ ಧಾರ್ಮಿಕ ಕೈಂಕರ್ಯದ ನಂಟು ಹಚ್ಚಿದ ಸ್ವರ್ಣವಲ್ಲೀ ಶ್ರೀಗಳು ಶನಿವಾರ ಇಳಿಹೊತ್ತಿನಲ್ಲಿ ನಾಲ್ಕು ಪಕ್ಷದ ಬಳಿಕ ವ್ರತದ ಬಳಿಕ ಪ್ರಥಮ ಬಾರಿಗೆ ಮಠದಿಂದ ಹೊರಗೆ ಬಂದು ಶಾಲ್ಮಲಾ ನದಿಗೆ ಪೂಜೆ ಸಲ್ಲಸಿದರು.
ಬಳಿಕ ಸದಾಶಿವಳ್ಳಿ ಈಶ್ವರ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದರು. ಇದೇ ವೇಳೆ ತುರವೇಕೆರೆ ಶ್ರೀಪ್ರಣವಾನಂದ ತೀರ್ಥರೂ ಚಾತುರ್ಮಾಸ್ಯ ವೃತವನ್ನು ಪೂರ್ಣಗೊಳಿಸಿದರು.