• first
  second
  third
  previous arrow
  next arrow
 • ಕಲಾರಾಮ ಕಲ್ಚರಲ್ ಫೌಂಡೇಷನ್’ನಿಂದ ಮುರಳಿಧರ ಕುಟುಂಬಕ್ಕೆ ಧನ ಸಹಾಯ

  300x250 AD

  ಯಲ್ಲಾಪುರ: ಇತ್ತೀಚೆಗೆ ನಿಧನರಾದ ಹಲಸಖಂಡದ ಹಿರಿಯ ಕಲಾವಿದ ಮುರಳಿಧರ ಅನಂತ ಯಲ್ಲಾಪುರ ಅವರ ಕುಟುಂಬಕ್ಕೆ ಕವಾಳೆಯ ಕಲಾರಾಮ ಕಲ್ಚರಲ್ ಫೌಂಡೇಷನ್ ನಿಂದ 25,000 ರೂ ಧನ ಸಹಾಯ ಮಾಡಲಾಯಿತು.

       ಮುರಳಿಧರ ಅವರ ಪುತ್ರ ಅನಂತ ಯಲ್ಲಾಪುರ ಅವರಿಗೆ ಫೌಂಡೇಷನ್ ಅಧ್ಯಕ್ಷ ಗಣಪತಿ ಭಾಗ್ವತ ಕವಾಳೆ ಚೆಕ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು, ಕವಾಳೆ ರಾಮಚಂದ್ರ ಭಾಗ್ವತ ಹಾಗೂ ಮುರುಳಿಧರ ಅವರ ಒಡನಾಟವನ್ನು ಮೆಲುಕು ಹಾಕಿದರು. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳು, ಸಮಾಜಮುಖಿ ಕಾರ್ಯ ಮಾಡುವವರು, ಬಡ ಕಲಾವಿದರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದೇವೆ ಎಂದರು.

  300x250 AD

      ಎನ್.ಎಸ್.ಭಟ್ಟ ನಂದೊಳ್ಳಿ ಮಾತನಾಡಿದರು. ಕಲಾರಾಮ ಕಲ್ಚರಲ್ ಫೌಂಡೇಷನ್ ನ ಚಂದ್ರಶೇಖರ ಭಟ್ಟ, ರಮೇಶ ಭಾಗ್ವತ, ನರಸಿಂಹ ಭಾಗ್ವತ ಗುಂಡ್ಕಲ್, ಗಣೇಶ ಗುಂಡ್ಕಲ್ ಇತರರಿದ್ದರು.

  Share This
  300x250 AD
  300x250 AD
  300x250 AD
  Back to top