Slide
Slide
Slide
previous arrow
next arrow

ರಸ್ತೆ ಕುಸಿತ; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಕಂದಕ

300x250 AD

ಅಂಕೋಲಾ: ತಾಲೂಕಿನ ಬಾಳೆಗುಳಿಯಿಂದ ಯಲ್ಲಾಪುರ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲ ಬಳಿ ಕಿರು ಸೇತುವೆಯಂಚಿನ ರಸ್ತೆ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ರಾತ್ರಿಯಿಡೀ ಸುರಿದ ಮಳೆಯಲ್ಲಿ ರಸ್ತೆಯ ಪಿಚ್ಚಿಂಗ್ ಕಿತ್ತುಹೋಗಿ ರಸ್ತೆ ಕುಸಿದಿದ್ದು, ಹೆದ್ದಾರಿಯಲ್ಲಿ 2 ಮೀಟರಿನಷ್ಟು ಅಗಲದ ಹೊಂಡ ಬಿದ್ದಿದೆ. ದಿನವೊಂದಕ್ಕೆ ಸುಮಾರು ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ರಸ್ತೆ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಸಂತೋಷ ಶೆಟ್ಟಿ, ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಹೆದ್ದಾರಿ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿಯೂ ಪೊಲೀಸ್ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಮಲ್ಟಿ ಎಕ್ಸೆಲನ ಭಾರೀ ವಾಹನಗಳು ಸಂಚರಿಸುವದರಿಂದ ಸೂಕ್ತ ನಿಗಾ ವಹಿಸಲಾಗುತ್ತಿದೆ. ಸೇತುವೆಯ ಬಳಿಯ ರಸ್ತೆಯ ಮೇಲೆ ಬಹಳಷ್ಟು ಹೊಂಡಗಳಿದ್ದು ಸದ್ಯ ಜೆಸಿಬಿ ಬಳಸಿ ಜಲ್ಲಿಕಲ್ಲು ಮತ್ತಿತರ ಸಾಮಗ್ರಿಗಳನ್ನು ಬಳಸಿ ಹೊಂಡಗಳನ್ನು ಮುಚ್ಚಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಜಿಲ್ಲಾ ವಿಭಾಗದ ಕಿರಿಯ ಎಂಜಿನಿಯರ್ ಪಿ.ಕೆ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಳೆ ಬೀಳುತ್ತಿದ್ದು, ಪಾಲಿಥಿನ್ ಶೀಟಿನ ಹೊದಿಕೆಯನ್ನು ಹಾಕಿ ಮಳೆಯಿಂದ ಇನ್ನೂ ಕುಸಿಯದಂತೆ ರಕ್ಷಣೆ ನೀಡಲಾಗುವದು ಮತ್ತು ಪರಿಣಿತರು ಸ್ಥಳ ಪರೀಕ್ಷೆ ನಡೆಸಿ ತುರ್ತು ದುರಸ್ತಿ ಕಾಮಗಾರಿ ನಡೆಸಲಾಗುವದು ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top