• Slide
    Slide
    Slide
    previous arrow
    next arrow
  • ಲಯನ್ಸ್ ಕ್ಲಬ್‌ನಿಂದ ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ

    300x250 AD

    ಅಂಕೋಲಾ: ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ವತಿಯಿಂದ ಸೆ.11ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೆ.ಎಲ್.ಇ ಸಂಸ್ಥೆಯ ಆವರಣದಲ್ಲಿ ಅಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಅಧ್ಯಕ್ಷೆ ಜಯಶ್ರೀ ಪಿ.ಶೆಟ್ಟಿ ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ವಿವಿಧ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಲಾಯನ್ಸ್ ಕ್ಲಬ್ ಅಂಕೋಲಾ ಸಿಟಿ ಇವರು ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸೆ.11ರ ಬೆಳಿಗ್ಗೆ ೮.೩೦ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಶಿಬಿರದಲ್ಲಿ ಕೆಎಂಸಿ ಮಣಿಪಾಲದ ಸುಪ್ರಸಿದ್ಧ ತಜ್ಞ ವೈದ್ಯರ ತಂಡದವರಿಂದ ಉಚಿತವಾಗಿ ನೇತ್ರ ತಪಾಸಣೆ, ಸಾಮಾನ್ಯ ಔಷಧಿ, ಪ್ರಸೂತಿ ಮತ್ತು ಸ್ತ್ರೀರೋಗ, ಚರ್ಮ ಹಾಗೂ ಕಿವಿ ಮೂಗು ಗಂಟಲು ಸಂಬಂಧಿತ ಕಾಯಿಲೆಗಳಿಗೆ ತಪಾಸಣೆಗಳು ನಡೆಸಿ ಸೂಕ್ತ ಸಲಹೆ ಮತ್ತು ಲಭ್ಯವಿರುವ ಔಷಧಿಗಳನ್ನು ನೀಡಲಾಗುವದು. ನೇತ್ರ ಪೊರೆ ಮತ್ತು ಇತರ ಕೆಲ ಅಗತ್ಯದ ಅನುಕೂಲ ಸಾಧ್ಯತೆಯ ಚಿಕಿತ್ಸೆಯವರನ್ನು ಗುರುತಿಸಿ ದಿನಾಂಕ ನಿಗದಿಪಡಿಸಿ ಕೆಎಂಸಿ ಮಣಿಪಾಲಕ್ಕೆ ಕರೆದುಕೊಂಡು ಹೋಗಿ ತಂದು ಬಿಡುವ ವ್ಯವಸ್ಥೆ ಮಾಡಲಾಗುವದು. ರೋಗಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗುವದು.
    ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆಯಲಿಚ್ಚಿಸುವವರು ಅಂದು ಬೆಳಿಗ್ಗೆ ೮ ಗಂಟೆಯಿAದ ೧೨ ಗಂಟೆಯವರೆಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಯಶ್ರೀ ಶೆಟ್ಟಿ (ಅಧ್ಯಕ್ಷರು), ಮೊ.9945243020, ಲಾ. ನಯನಾ ಶೇಟ್ (ಕಾರ್ಯದರ್ಶಿ) ಮೊ.7846080833, ಲಾ. ನೀತಾ ಮಹಾಲೆ (ಕೋಶಾಧ್ಯಕ್ಷರು) ಮೊ.9143109348 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
    ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಸಿಟಿಯ ನಿರ್ದೇಶಕ ಎನ್.ಎಚ್.ನಾಯ್ಕ ಶಿಬಿರದ ವಿವರಗಳನ್ನು ತಿಳಿಸಿದರು. ನಿರ್ದೇಶಕ ಮೋಹನ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ಕಮಲಾಕರ ಬೋರಕರ, ನಿಕಟಪೂರ್ವ ಅಧ್ಯಕ್ಷ ಸುರೇಶ ಡಿ ನಾಯ್ಕ, ಎಂಜೆಎಫ್ ಶಶಿಧರ ಶೇಣ್ವಿ, ಬೀರಾ ಬೋರಕರ, ಸುಬ್ರಹ್ಮಣ್ಯ ರೇವಣಕರ, ಉದಯಾನಂದ ನೇರಲಕಟ್ಟೆ ಉಪಸ್ಥಿತರಿದ್ದರು. ಪತ್ರಿಕಾ ವರದಿಗಾರ ಕೆ.ರಮೇಶ ಮಾಹಿತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top