• first
  second
  third
  previous arrow
  next arrow
 • ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗದವರಿಂದ ಗಣಪತಿಗೆ ವಿಶೇಷ ಪೂಜೆ

  300x250 AD

  ಹೊನ್ನಾವರ: ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸಲ್ಪಡುವ ಗಣಪತಿಗೆ ಎಂಟನೇ ದಿನವಾದ ಬುಧವಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕುಟುಂಬ ವರ್ಗದವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

  ಪ್ರತಿದಿನವೂ ಕಾಕಿ ತೊಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸರು ಪೂಜೆಯ ದಿನ ಧಾರ್ಮಿಕ ಭಾವನೆಯಿಂದ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಗಣಪತಿ ಪ್ರತಿಷ್ಠಾಪಿಸಲಾದ ಆವರಣವನ್ನು ಫಲಪುಷ್ಪಗಳಿಂದ ಶೃಂಗರಿಸಲಾಗಿತ್ತು. ಅರ್ಚಕರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಗುಮ್ಟೆಪಾಂಗ್ ವಾದ್ಯಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಭಜನೆ ಮಾಡಲಾಯಿತು. ಮಹಾಮಂಗಳಾರತಿ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು.

  300x250 AD

  ಸಿವಿಲ್ ಜಡ್ಜ್ ಹಿರಿಯ ವಿಭಾಗದ ನ್ಯಾಯಾಧೀಶ ಕುಮಾರ ಜಿ., ತಹಶೀಲ್ದಾರ್ ನಾಗರಾಜ್ ನಾಯ್ಕಡ್, ಗ್ರೇಡ್ 2 ತಹಶಿಲ್ದಾರ್ ಉಷಾ ಪಾವಸ್ಕರ್, ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್, ಸಿಪಿಐ ಶ್ರೀಧರ್ ಎಸ್.ಆರ್., ಪಿಎಸ್‌ಐ ಮಹಾಂತೇಶ ನಾಯಕ, ಸಾವಿತ್ರಿ ನಾಯ್ಕ, ಡಾ.ರಾಜೇಶ ಕಿಣಿ, ಉಷಾ ಹಾಸ್ಯಗಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಶ್ರೀ ದೇವರ ಪ್ರಸಾದ ಸ್ವೀಕರಿಸದರು.

  Share This
  300x250 AD
  300x250 AD
  300x250 AD
  Back to top