Slide
Slide
Slide
previous arrow
next arrow

ಲಯನ್ಸ್ ಕ್ಲಬ್’ನಿಂದ ಪೌಷ್ಟಿಕ ಆಹಾರ ಮತ್ತು ವ್ಯಕ್ತಿತ್ವ ವಿಕಸನ ಉಪನ್ಯಾಸ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಲಯನ್ಸ್ ಕ್ಲಬ್’ನಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ತ್ರಿವಿಕ್ರಮ ಪಟವರ್ಧನರು ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿಕೊಟ್ಟರು. ಔಷಧ ಅಂಗಡಿಗಳಿಗೆ, ಆಸ್ಪತ್ರೆಗಳಿಗೆ ಓಡಾಡುವುದನ್ನು ತಪ್ಪಿಸಲು ಉತ್ತಮ ಪೌಷ್ಟಿಕ ಆಹಾರದ ಅವಶ್ಯಕತೆ ಇದ್ದು ಮನೆಯಲ್ಲಿ ಅಮ್ಮ ಬಡಿಸಿದ ಊಟದಲ್ಲಿ ತರಕಾರಿ, ಸೊಪ್ಪು, ಬೇಳೆಕಾಳುಗಳನ್ನು ಚೆಲ್ಲದೆ ತಿನ್ನಬೇಕು ಎಂದು ಹೇಳಿದರು. ನಮ್ಮ ಸಾಂಪ್ರದಾಯಕವಾದ ಊಟದಲ್ಲಿ ನಮಗೆ ಬೇಕಾದ ಎಲ್ಲ ಪ್ರೋಟೀನ್, ಕಬ್ಬಿಣಾಂಶ, ಲವಣ, ಜಿಡ್ಡು, ವಿಟಮಿನ್ನುಗಳು ಇದ್ದು ಅವು ಸರಿಯಾದ ಪ್ರಮಾಣದಲ್ಲಿ ಸಿಗುತ್ತವೆ. ಉತ್ತಮ ದೇಹದಾರ್ಢ್ಯತೆ ಇದ್ದಾಗ ವ್ಯಕ್ತಿಯ ಮತ್ತು ವ್ಯಕ್ತಿತ್ವದ ವಿಕಸನ ಚೆನ್ನಾಗಿ ಅಗುತ್ತದೆ ಎಂದು ನುಡಿದರು. ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊಫೆಸರ್ ರವಿ ನಾಯಕರವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಿದರು. ಚೌಕಟ್ಟಿನಾಚೆ ಯೋಚಿಸುವುದರ ಮಹತ್ವವನ್ನು ತಿಳಿಸಿಕೊಟ್ಟರು. ಶಾಲಾ ಪಠ್ಯದಾಚೆ ಶಿಕ್ಷಕರೂ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಅವಶ್ಯಕತೆಯನ್ನು ಮನನಮಾಡಿಕೊಟ್ಟರು. ಸಣ್ಣ ಸಣ್ಣ ಕಥೆಗಳ ಮೂಲಕ ಮಕ್ಕಳಿಗೆ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳುವ ಬಗೆಯನ್ನು ವಿವರಿಸಿದರು. ಮಕ್ಕಳಿಗಾಗಿ ಭಾರತ ನಕ್ಷೆ ಬಿಡಿಸುವ ಮತ್ತು ಶಿಕ್ಷಕರಿಗಾಗಿ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಲಯನ್ ರಮಾ ಪಟವರ್ಧನ್, ಲಯನ್ ಸುಮಂಗಲಾ ಹೆಗಡೆ ಉಪಸ್ಥಿತರಿದ್ದರು. ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷೆಯಾದ ಶ್ರೀಮತಿ ರಾಧಾ ಹೆಗಡೆಯವರು ಶಾಲೆಯ ಬಗ್ಗೆ ಮಾತನಾಡಿ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯೋಧ್ಯಾಪಕ ನಾರಾಯಣ ನಾವಡಾ ಮತ್ತು ಎಲ್ಲ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top