• Slide
    Slide
    Slide
    previous arrow
    next arrow
  • ‘ಹಣತೆ’ ಹಳಿಯಾಳ ಸಮಿತಿ ಅಸ್ತಿತ್ವಕ್ಕೆ

    300x250 AD

    ಹಳಿಯಾಳ: ಹಣತೆ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ಇದರ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅನುಮೋದನೆಯೊಂದಿಗೆ ಸಮಿತಿಯ ಯಾದಿಯನ್ನು ತಾಲೂಕಾಧ್ಯಕ್ಷ ರಾಮಕೃಷ್ಣ ಜಿ.ಗುನಗ ಬಿಡುಗಡೆ ಮಾಡಿದ್ದಾರೆ.
    ಹಣತೆ ತಾಲೂಕು ಘಟಕದ ಅಧ್ಯಕ್ಷರಾಗಿ ಹಿರಿಯ ರಂಗಕರ್ಮಿ, ಹೆಸ್ಕಾಂ ನಿವೃತ್ತ ಎಇಇ ರಾಮಕೃಷ್ಣ ಜಿ.ಗುನಗ, ಗೌರವ ಕಾರ್ಯದರ್ಶಿಗಳಾಗಿ ಅರುಣ ಗೊಂದಳಿ, ಬಾಬು ಸಾವಟಗಿ, ಗೌರವ ಕೋಶಾಧ್ಯಕ್ಷರಾಗಿ ಮಾರುತಿ ಹೂವಪ್ಪನವರ್, ಉಪಾಧ್ಯಕ್ಷರಾಗಿ ಷರೀಫ್ ಹಣಗಿ, ವಿಷ್ಣು ಮಾನೆ ನೇಮಕಗೊಂಡಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪಕ ಹೈಬತ್ತಿ, ಶಂಕರ ತೋರ್ಲೆಕರ್, ಬಸವರಾಜ ಶಂಕರಗೌಡ ಪಾಟೀಲ, ಅನಿಲ ಬದ್ರಿ, ಸಿದ್ದರಾಮ ಚೆನ್ನಬತ್ತಿ, ಶರ್ಮಿಳಾ ಹಿರೇಮಠ, ವಿಕ್ಟೋರಿಯಾ ಮೆನೆಜಸ್ ನೇಮಕಗೊಂಡಿದ್ದಾರೆ.
    ಗೌರವ ಉಪಾಧ್ಯಕ್ಷರಾಗಿ ಡಾ.ಚಂದ್ರಶೇಖರ ಎಸ್.ಓಶಿಮಠ, ವಿಲಾಸ್ ಮಿರಾಶಿ, ಜೆ.ಡಿ.ಗಂಗಾಧರ, ದೇಮಣ್ಣ ಮೇತ್ರಿ, ನಾರಾಯಣ ಗಾಡೇಕರ, ಮಜೀದ್ ಮುಲ್ಲಾ, ಆನಂದ ಮೇತ್ರಿ, ಶಿವಾನಂದ ಗರಗ, ಭಾರತಿ ಗೋಂದಳೆ ಇರಲಿದ್ದಾರೆ. ಹಳಿಯಾಳ ಘಟಕವು ಮುಂದಿನ ದಿನಗಳಲ್ಲಿ ಸಾಹಿತ್ಯ, ರಂಗಭೂಮಿ, ಸಂಗೀತ ಇವುಗಳಲ್ಲದೇ ಜಾನಪದ ಪ್ರಕಾರಗಳಲ್ಲೂ ಕೆಲಸ ಮಾಡಲಿದೆ ಎಂದು ಎಂದು ಹಣತೆ ತಾಲೂಕು ಅಧ್ಯಕ್ಷ ರಾಮಕೃಷ್ಣ ಜಿ.ಗುನಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಈ ಸಂದರ್ಭದಲ್ಲಿ ಹಳಿಯಾಳ ಘಟಕಕ್ಕೆ ನೇಮಕಗೊಂಡ ನೂತನ ಅಧ್ಯಕ್ಷ ರಾಮಕೃಷ್ಣ ಗುನಗ ಅವರನ್ನು ತಾಲೂಕು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸನ್ಮಾನಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top