Slide
Slide
Slide
previous arrow
next arrow

ನಿರಾಶ್ರಿತರ ಹೋರಾಟದ ರೂವಾರಿ ರಾಣೆ ನಿಧನಕ್ಕೆ ಸಂತಾಪ

300x250 AD

ಕಾರವಾರ: ಕಾರವಾರ- ಜೊಯಿಡಾ ವಿಧಾನಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿ ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸತತವಾಗಿ ಶ್ರಮಿಸಿದ್ದ ಹಾಗೂ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಹೋರಾಟದ ರೂವಾರಿ ಪ್ರಭಾಕರ ರಾಣೆ ಅವರ ನಿಧನಕ್ಕೆ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಣೆಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಕಾರವಾರ- ಜೊಯಿಡಾ ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪಾರಂಭಿಸುವುದರ ಮೂಲಕ ಗ್ರಾಮೀಣ ಭಾಗದ ಬಡವರು ಶಿಕ್ಷಣದಿಂದ ವಂಚಿತರಾಗದಂತೆ ಪ್ರಮುಖ ಪಾತ್ರವಹಿಸಿದ್ದರು. ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಮೂಲಕ ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.

300x250 AD

ಉತ್ತರ ಕನ್ನಡ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಅವರ ನೇತೃತ್ವದಲ್ಲಿ ಅನೇಕ ಯಶಸ್ವಿ ಹೋರಾಟಗಳು ನಡೆದಿದ್ದವು. ವಿಶೇಷವಾಗಿ 1986ರಿಂದ ಪ್ರಭಾಕರ ರಾಣೆಯವರು ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ದೇಶದ ರಕ್ಷಣಾ ಯೋಜನೆಗಾಗಿ ಕಾರವಾರ-ಅಂಕೋಲಾ ತಾಲೂಕಿನ ಸಾವಿರಾರು ನಿರಾಶ್ರಿತರ ಹಕ್ಕುಗಳಿಗಾಗಿ ನಿರಂತರವಾಗಿ ಸರಕಾರದ ಗಮನ ಸೆಳೆಯಲು ಅವರ ನೇತೃತ್ವದಲ್ಲಿ ಹಲವು ವರ್ಷಗಳವರೆಗೆ ಅನೇಕ ಐತಿಹಾಸಿಕ ಹೋರಾಟಗಳು ನಡೆದಿದ್ದವು. ಇಂತಹ ಜನಪರ ಹೋರಾಟಗಾರ, ಧೀಮಂತ ರಾಜಕಾರಣಿ, ಶಿಕ್ಷಣ ಪ್ರೇಮಿ ಪ್ರಭಾಕರ ರಾಣೆ ಅವರನ್ನು ನಾವು ಕಳೆದುಕೊಂಡಿದ್ದು ಅತ್ಯಂತ ದುಃಖದ ಸಂಗತಿಯಾಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top