ಅಂಕೋಲಾ: ವಿದ್ಯಾರ್ಥಿಗಳ ನಮ್ಮ ಮೂಲ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದು, ಭಕ್ತಿಗೀತೆ, ಶೃದ್ಧೆ ಸೇರಿದಂತೆ ಎಲ್ಲವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೇ ಎಲ್ಲೆ ಸ್ಪರ್ಧೆ ನಡೆದರೂ ಕೂಡ ಅಲ್ಲಿ ಭಾಗವಹಿಸುವುದು ಅತಿ ಮುಖ್ಯ. ಯಾವುದೇ ವೇದಿಕೆಯಲ್ಲಿ ಅವಕಾಶ ಸಿಕ್ಕಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಮಧಾರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ ಹೇಳಿದರು.
ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವದ ನಿಮಿತ್ತ ಹಮ್ಮಿಕೊಂಡ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ಸಮಾಜದ ಪ್ರಮುಖರಾದ ರಾಜೇಂದ್ರ ನಾಯ್ಕ, ಉಮೇಶ ಎನ್. ನಾಯ್ಕ, ಡಿ.ಜಿ.ನಾಯ್ಕ, ವೆಂಕಟ್ರಮಣ ನಾಯ್ಕ, ಜಿ.ಎನ್.ನಾಯ್ಕ, ಏಕನಾಥ ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ಜಟ್ಟಿ ನಾಯ್ಕ, ಬೊಮ್ಮಯ್ಯ ನಾಯ್ಕ, ಗಣಪತಿ ನಾಯ್ಕ, ಸಂಜಯ ನಾಯ್ಕ ಇತರರಿದ್ದರು. ನಾಗರಾಜ ನಾಯ್ಕ, ಕೃಷ್ಣ ನಾಯ್ಕ ಬೊಬ್ರವಾಡ, ರಾಜೇಶ ಮಿತ್ರಾ ನಾಯ್ಕ ನಿರ್ವಹಿಸಿದರು.
ಬಹುಮಾನ: ಭಕ್ತಿಗೀತೆ ಸ್ಪರ್ಧೆಯಲ್ಲಿ ಧನ್ಯಾ ಶೇಣ್ವಿ ಪ್ರಥಮ, ಶ್ರೇಯಾ ಶೆಟ್ಟಿ ದ್ವಿತೀಯ, ರಶ್ಮಿ ನಾಯ್ಕ ತೃತೀಯ, ಸಾಗರ ಗೌಡ, ಶ್ರೀನಿಧಿ ನಾಯಕ ಸಮಾಧಾನಕರ ಹಾಗೂ ಭಾಗ್ಯಶ್ರೀ ನಾಯಕ, ಪ್ರಥ್ವಿಕುಮಾರ ನಡೇರ ಬಹುಮಾನ ಪಡೆದುಕೊಂಡರು. ಗಾಯಕ ಗೋಪಾಲಕೃಷ್ಣ ನಾಯ್ಕ ಮಿರ್ಜಾನ್, ವರದಿಗಾರ ನಾಗರಾಜ ಜಾಂಬಳೇಕರ ನಿರ್ಣಾಯಕರಾಗಿದ್ದರು.