ಹಳಿಯಾಳ: ಪಟ್ಟಣದ ಅಮೃತ್ ಫಿಶ್‌ಲ್ಯಾಂಡ್ ಹೋಟೆಲ್‌ನಲ್ಲಿ ಸೋಮವಾರ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ.
ಹೋಟೆಲ್ ಆಕಾಶ್ ಗಜಾಕೋಶ ಮಾಲಿಕತ್ವದ್ದಾಗಿದ್ದು, ಬೆಂಕಿ ಅವಘಡದಿಂದ ಹೊಟೇಲ್ ವಸ್ತುಗಳಾದ ಫ್ರಿಡ್ಜ್, ಕುರ್ಚಿ ಮುಂತಾದವು ಸುಟ್ಟು ಕರಕಲಾಗಿವೆ. ತಕ್ಷಣ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ.