ಭಟ್ಕಳ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಸಂಭ್ರಮ ಎಂಬ ವಿಷಯದ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಥಮಿಕ ವಿಭಾಗದಲ್ಲಿ ಹೊನ್ನೆಮಡಿ ಶಾಲೆಯ ಸುಮಲತಾ ಡಿ.ನಾಯ್ಕ ಪ್ರಥಮ, ಕೊಡಸೂಳ್‌ನ ಪರಮೇಶ್ವರ ನಾಯ್ಕ ದ್ವಿತೀಯ, ಕೆರೆಗದ್ದೆಯ ಸೌಮ್ಯ ದೇವಾಡಿಗ ತೃತೀಯ ಹಾಗೂ ಹೇರೂರಿನ ವಿಜಯಕುಮಾರ ನಾರ್ವೆಕರ, ಚಿತ್ರಾಪುರ ಶಾಲೆಯ ಎಚ್.ಎನ್.ನಾಯ್ಕ ಪ್ರೋತ್ಸಾಹಕ ಬಹುಮಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಬೆಳ್ಕೆ ಶಾಲೆಯ ಎನ್.ಜಿ.ಗೌಡ ಪ್ರಥಮ, ಸೋನಾರಕೇರಿಯ ಸವಿತಾ ನಾಯ್ಕ ದ್ವಿತೀಯ, ನವಾಯತ ಕಾಲನಿ ಉರ್ದು ಶಾಲೆಯ ಶಿವಮ್ಮ ಗೊಂಡ ತೃತೀಯ ಹಾಗೂ ಕುಂಟವಾಣಿಯ ಕುಮಾರ ನಾಯ್ಕ, ತೆಂಗಿನಗುಂಡಿಯ ವಿಮಲಾ ಪಟಗಾರ ಪ್ರೋತ್ಸಾಹಕ ಬಹುಮಾನ ಪಡೆದರು.
ಕಾಲೇಜು ವಿಭಾಗದಲ್ಲಿ ಗುರು ಸುಧೀಂದ್ರ ಕಾಲೇಜಿನ ವಿಶ್ವನಾಥ ಭಟ್ಟ ಪ್ರಥಮ, ಬೀನಾ ವೈದ್ಯ ಕಾಲೇಜಿನ ಹೇಮಾವತಿ ನಾಯ್ಕ ದ್ವಿತೀಯ, ಆನಂದಾಶ್ರಮ ಪ.ಪೂ.ಕಾಲೇಜಿನ ಪೆಟ್ರಿಕ್ ಟೆಲ್ಲಿಸ್ ತೃತೀಯ ಸ್ಥಾನ ಪಡೆದರೆ, ಸಿದ್ಧಾರ್ಥ ಪದವಿ ಕಾಲೇಜಿನ ಮನೋರಮಾ ಪ್ರೋತ್ಸಾಹಕ ಬಹುಮಾನ ಪಡೆದರು.
ಭಾಗವಹಿಸಿದ ಎಲ್ಲರಿಗೂ ಪುಸ್ತಕ ಬಹುಮಾನವನ್ನು ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ವೇದಿಕೆಯಲ್ಲಿ ವಿತರಿಸಲಾಯಿತು. ಶಿಕ್ಷಕರಿಗಾಗಿ ಆಯೋಜಿಸಿದ ಸ್ವರಚಿತ ಕವನ ರಚನಾ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿರುವ ಶಿಕ್ಷಕಸಮೂಹಕ್ಕೆ ಹಾಗೂ ಬಹುಮಾನಿತ ಶಿಕ್ಷಕರುಗಳಿಗೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.