Slide
Slide
Slide
previous arrow
next arrow

ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯ

300x250 AD

ಕಾರವಾರ: ಯಾವುದೇ ಜಾತಿ, ಧರ್ಮದ ಪರಿವೇ ಇಲ್ಲದೇ, ಹಸಿದವರಿಗೆ ಅನ್ನ ನೀಡುವುದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲೊಂದು ಎಂದು ಶ್ರೇಷ್ಠ ಗುರು ಫಾದರ್ ಸೈಮನ್ ಟೆಲ್ಲಿಸ್ ಹೇಳಿದರು.

ಮದರ್ ಥೆರೆಸಾ ಸೇವಾ ತಂಡವು ವೈದ್ಯಕೀಯ ಕಾಲೇಜು ಆವರಣದಲ್ಲಿ ಹಸಿದವರಿಗೆ ಉಚಿತ ಊಟ ವಿತರಣೆಯ ಯಶಸ್ವಿ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಅವರು ಮಾತನಾಡಿದರು. ಶಿಕ್ಷಕಿಯೂ ಆಗಿದ್ದ ಮದರ್ ಥೆರೆಸಾ ಅವರು ತಮ್ಮ ಸುತ್ತಮುತ್ತಲಿನ ಹಸಿವೆಯಿಂದ ಬಳಲುವವರು, ಕುಷ್ಠರೋಗ ಪೀಡಿತರು, ಅಂಗವಿಕಲರು, ಕ್ಷಯರೋಗಿಗಳನ್ನು ಕಂಡು ವಿಚಲಿರಾಗಿದ್ದರು. ನಂತರ ಅವರ ಸೇವೆಯಲ್ಲಿಯೇ ದೇವರನ್ನು ಕಂಡಂಥವರು. ಅವರಿಂದ ಪ್ರೇರಣೆ ಪಡೆದು ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಹಸಿದವರಿಗೆ ನಿತ್ಯ ಉಚಿತ ಊಟ ನೀಡುತ್ತಿರುವುದು ಶ್ಲಾಘನೀಯ ಎಂದರು.

ಭವೇಶಾನಂದ ಸ್ವಾಮೀಜಿ ಮಾತನಾಡಿ, ದಯೆ, ಮಾನವತೆ ಮೀರಿ ಧರ್ಮವಿಲ್ಲ. ಹಸಿದವರಿಗೆ, ಅಸಹಾಯಕರಿಗೆ ನೆರವಾಗುವುದೇ ನಿಜವಾದ ಧರ್ಮ, ಭಕ್ತಿ ಎಂದರು.

ಸಮಾಜ ಸೇವಕ ಮಾಧವ ನಾಯಕ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ಅತ್ಯಂಥ ಮಹಾನ್ ಕಾರ್ಯಗಳಲ್ಲೊಂದು. ಕಳೆದ ಐದು ವರ್ಷಗಳಿಂದ, ನಿತ್ಯ ನೂರಾರು ಹಸಿದವರಿಗೆ ಸತತವಾಗಿ ಉಚಿತ ಊಟ ವಿತರಣೆ ಮಾಡುತ್ತಿರುವುದು ಅತ್ಯಂತ ಮಹಾನ್ ಕಾರ್ಯ. ಮದರ್ ಥೇರೆಸಾ ಅವರಂಥ ಶ್ರೇಷ್ಠ ವ್ಯಕ್ತಿಗಳ ಚಿಂತನೆ, ಆದರ್ಶವನ್ನು ಪಾಲಿಸಿದರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಮುಂದಿನ ದಿನಗಳಲ್ಲಿ ಈ ಸೇವಾ ತಂಡದಿಂದ ಸಂಜೆಯೂ ಸಹ ಹಸಿದವರಿಗೆ ಊಟ ದೊರಕುವಂತಾಗಲಿ ಎಂದರು.

ಕ್ರಿಮ್ಸ್ನ ನಿರ್ದೇಶಕ ಡಾ.ಗಜಾನನ ನಾಯಕ, ಆಸ್ಪತ್ರೆಗೆ ಜಿಲ್ಲೆಯ ಮೂಲೆ ಮೂಲೆಯಿಂದ ನಿತ್ಯ ಸಾವಿರಾರು ರೊಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಅವರಲ್ಲಿ ಆರ್ಥಿಕವಾಗಿ ಹಿಂದುಳಿದರೇ ಹೆಚ್ಚು. ಅಂಥವರಿಗೆ ಆಸ್ಪತ್ರೆಯ ಆವರಣದಲ್ಲಿ ನಿತ್ಯ ಉಚಿತ ಊಟ ದೊರೆಯುತ್ತಿರುವುದು ಅತ್ಯಂಥ ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಆಸ್ಪತ್ರೆ ಮೆಲ್ದೇರ್ಜೆಗೆರುತ್ತಿದ್ದು, ಸಹಜವಾಗಿ ರೋಗಿಗಳ ಸಂಖ್ಯೆಯೂ ಹೆಚ್ಚಲಿದೆ. ಅವರೆಲ್ಲರಿಗೂ ಮದರ್ ಥೇರೆಸಾ ಸೇವಾ ತಂಡದಿಂದ ಉಚಿತ ಊಟದ ಪ್ರಯೋಜನ ದೊರಕಲಿ ಎಂದು ಶುಭ ಹಾರೈಸಿದರು.

300x250 AD

ಸೇಂಟ್ ಮದರ್ ಥೇರೆಸಾ ಸೇವಾ ತಂಡದ ಪ್ರಮುಖ ಸ್ಯಾಮಸನ್ ಡಿಸೋಜಾ ಮಾತನಾಡಿ, ಇವರೆಗೆ ಒಟ್ಟು ಮೂರು ಲಕ್ಷ ಅರವತ್ತೆöÊದು ಸಾವಿರದ ಮೂವತ್ತೊಂದು (3,65,031) ಜನರಿಗೆ ಉಚಿತ ಊಟ ವಿತರಣೆ ಮಾಡಲಾಗಿದೆ. ಈ ಮಹಾನ್ ಕಾರ್ಯಕ್ಕೆ ಮದರ್ ಥೇರೆಸಾ ಅವರೇ ಪ್ರೇರಣೆ ಎಂದರು.

ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ರೀಟಾ, ಶ್ರೀಮತಿ ರೋಹಿಣಿ ನಾಯ್ಕ, ಅಂಬುಲೆನ್ಸ್ ಚಾಲಕ ಸುರೇಶ ಕಾಂಬ್ಳೆ ಹಾಗೂ ವ್ಯವಸ್ಥಾಪಕ ಸುಭಾಷ ಮಾಳ್ಸೇಕರ್ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಾ.ಶ್ರೀನಿವಾಸ, ಡಾ.ಪ್ರಶಾಂತ್, ದಿವೇಕರ್ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಆರ್.ಎಸ್.ಹಬ್ಬು ಸೇರಿದಂತೆ ಸೇವಾ ತಂಡದಲ್ಲಿ ದುಡಿಯುತ್ತಿರುವ 26 ಸ್ವಯಂ ಸೇವಕರು ಸೇರಿದಂತೆ ಹಲವರು ಇದ್ದರು. ಸಮಾಜ ಸೇವಕ ಬೈತಖೋಲ್‌ನ ವಿಲ್ಸನ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top