• Slide
  Slide
  Slide
  previous arrow
  next arrow
 • ಮನಸೂರೆಗೊಂಡ ‘ನಾದ ನಾಟ್ಯೋತ್ಸವ’

  300x250 AD

  ಶಿರಸಿ: ನಗರದ ಲಯನ್ಸ್ ಸಭಾಭವನದಲ್ಲಿ  ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್  ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ನಡೆದ ನಾದ ನಾಟ್ಯೋತ್ಸವ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು.

  ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯಕ್ಷಗಾನ ಖ್ಯಾತ ಕಲಾವಿದ ಗೋಡೆ ನಾರಾಯಣ ಹೆಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಕಲೆ ಎನ್ನುವುದು ತಪಸ್ಸು ಅದನ್ನು ಸಿದ್ಧಿಸಿಕೊಳ್ಳಲು ಮಾನಸಿಕ ಸ್ಥೈರ್ಯ,ಇಚ್ಛಾಶಕ್ತಿ ಪ್ರಬಲವಾಗಿರಬೇಕು. ಕಲೆಯಲ್ಲಿ ಗಂಡು ಕಲೆ ಹೆಣ್ಣು ಕಲೆ ಎಂಬ ಬೇಧವಿಲ್ಲ. ಯಕ್ಷಗಾನವನ್ನು ಸ್ತ್ರೀಯರೂ ಮಾಡಬಹುದು ಎಂದರು.

  ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡಮಿ ಸದಸ್ಯೆ ಹಾಗೂ ಯಕ್ಷಗಾನ ಕಲಾವಿದೆಯಾದ ನಿರ್ಮಲಾ  ಹೆಗಡೆ ಗೋಳಿಕೊಪ್ಪ ಇವರಿಗೆ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆಯಾದ ನನ್ನನ್ನು ಗೌರವಿಸಿ ಕಲೆ ಹಾಗೂ ಕಲಾವಿದರ ಸಮ್ಮಿಳಿತಕ್ಕೆ,ಸುಮಧುರ ಬಾಂಧವ್ಯಕ್ಕೆ ಇವತ್ತಿನ ಕಾರ್ಯಕ್ರಮ ಸಾಕ್ಷಿಯಾಯಿತು ಎಂದರು.ಗೋಡೆ ಅವರಿಂದ ಸಂಮಾನ ಸ್ವೀಕರಿಸಿದ್ದಕ್ಕೆ ಧನ್ಯತಾ ಭಾವ ವ್ಯಕ್ತಪಡಿಸಿದರು.

  ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ  ಸುರೇಶ ಹೆಗಡೆ ಹಕ್ಕಿಮನೆಯವರು, ಸ್ತ್ರೀಯರು ಮದುವೆಯ ನಂತರವೂ ತಮ್ಮ ಕಲೆಯನ್ನು ಮುಂದುವರಿಸಿದರೆ ಮುಂದಿನ ಪೀಳಿಗೆಗೆ ಕೊಡುಗೆಯನ್ನು ನೀಡಲು ಸಾಧ್ಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಲಯನ್ಸ ಕ್ಲಬ್  ಅಧ್ಯಕ್ಷ ಎನ್.ವಿ.ಜಿ ಭಟ್ಟ  ಹಾಗೂ ವಿದುಷಿ ಸ್ಮಿತಾ ಹೆಗಡೆ ಕುಂಟೆಮನೆ ಉಪಸ್ಥಿತರಿದ್ದರು.

  300x250 AD

  ನ೦ತರದಲ್ಲಿ ಮೈತ್ರೇಯಿ ನೃತ್ಯಕಲಾ ಟ್ರಸ್ಟ್ ನ ಮಕ್ಕಳಿಂದ ವಿದುಷಿ ಸೌಮ್ಯ ಹೆಗಡೆ ನಿರ್ದೇಶನದಲ್ಲಿ ಭರತನಾಟ್ಯ ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಮಕ್ಕಳಿಂದ ಶ್ರೀಮತಿ ಭವ್ಯ ಕೆ.ಭಟ್ ಮಾರ್ಗದರ್ಶನದಲ್ಲಿ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

   ವಿಶೇಷ ಆಮಂತ್ರಿತರಾಗಿ ಸಂಗೀತ ಕಲಾವಿದರಾದ ಬೆಂಗಳೂರಿನ ರಾಜೇಶ್ವರಿ ಹೆಗಡೆಯವರ ಸಂಗೀತ ಪ್ರೇಕ್ಷಕರನ್ನು ರಂಜಿಸಿತು.

  ಹೊಸ ಪರಿಕಲ್ಪನೆಯೊಂದಿಗೆ ಮೂಡಿ ಬಂದ ಯುವ ನೃತ್ಯೋಲ್ಲಾಸದಲ್ಲಿ ವಿ.ಅನುರಾಧಾ ಹೆಗಡೆ ಶಿಷ್ಯೆ ವಿದುಷಿ ಕುಮಾರಿ ಕೀರ್ತನಾ ಹೆಗಡೆ, ವಿ.ವಿಜಯಲಕ್ಷ್ಮಿ ಕಂಪ್ಲಿ ಇವರ ಶಿಷ್ಯ ಕೃಷ್ಣ ಭಾಗವತ, ವಿ.ಸಂಪದ ಮರಾಠೆಯವರ ಶಿಷ್ಯ ಸಂದೀಪ ಮರಾಠೆ ತಮ್ಮ ವಿದ್ವತ್ ಪ್ರತಿಭೆಯನ್ನು ಅನಾವರಣಗೊಳಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top