ಅಂಕೋಲಾ: ಪ್ರತಿಭೆಗಳು ಎಲ್ಲ ವಿದ್ಯಾರ್ಥಿಗಳಲ್ಲಿ ಇರುತ್ತದೆ. ಆದರೆ ಕೆಲವೊಮ್ಮೆ ಅವಕಾಶಗಳು ಸಿಗುವುದಿಲ್ಲ. ಹೀಗಾಗಿ ನಾಮಧಾರಿ ಗಣೇಶೋತ್ಸವ ಸಮಿತಿಯವರು ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗಾಗಿ 6 ದಿನಗಳ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿತ್ತು ಎಂದು ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪಟ್ಟಣದ ಕಾಕರಮಠದ ನಾಮಧಾರಿ ಸಭಾಭವನದಲ್ಲಿ ಗಣೇಶೋತ್ಸವ ಸಮಿತಿಯವರು ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತು ಬಹುಮಾನ ವಿತರಿಸಿ ಅವರು ಮಾತನಾಡಿದರು. ಪಾಲಕರು ಕೂಡ ಮಕ್ಕಳಲ್ಲಿ ಪ್ರತಿಭೆಯಿದ್ದರೆ ಅದನ್ನು ನಿರ್ಲಕ್ಷಿಸದೇ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ವಿ.ನಾಯ್ಕ ಆಚಾ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಮೋಹನ ಎಚ್.ನಾಯ್ಕ, ಈ ಸಂದರ್ಭದಲ್ಲಿ ಪ್ರಮುಖರಾದ ಉಮೇಶ ಎನ್.ನಾಯ್ಕ, ಏಕನಾಥ ನಾಯ್ಕ, ವಿ.ಸಿ.ನಾಯ್ಕ, ರಾಜು ನಾಯ್ಕ, ಶಿವಾನಂದ ನಾಯ್ಕ, ಬೊಮ್ಮಯ್ಯ ನಾಯ್ಕ, ಜಯಂತ ನಾಯ್ಕ, ವಿಜಯಕುಮಾರ ನಾಯ್ಕ, ಗಜೇಂದ್ರ ನಾಯ್ಕ, ಗೋಪಾಲಕೃಷ್ಣ ನಾಯ್ಕ ಇತರರಿದ್ದರು. ಉಪನ್ಯಾಸಕ ಕೃಷ್ಣ ನಾಯ್ಕ ಬೊಬ್ರವಾಡ ನಿರ್ವಹಿಸಿದರು. ವರದಿಗಾರ ನಾಗರಾಜ ಮಂಜಗುಣಿ ಸ್ವಾಗತಿಸಿದರು.
ಸ್ಪರ್ಧೆ ವಿಜೇತರು: 1ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಕ್ತಿಗೀತೆ ಸ್ಪರ್ಧೆಯಲ್ಲಿ ಆರ್ಯ ಶೆಟ್ಟಿ ಪ್ರಥಮ, ಸಹನಾ ಆಗೇರ ದ್ವಿತೀಯ, ಹರಿಪ್ರೀತ್ ನಾಯ್ಕ ತೃತೀಯ, ಬಬಿತಾ ನಾಯ್ಕ, ಸಾನ್ವಿ ನಾಯ್ಕ ಸಮಾಧಾನಕರ ಹಾಗೂ ಸನ್ನಿಧಾ ನಾಯ್ಕ, ಜಾನು ಪರಮಾರ, ಸೃಷ್ಠಿ ರಾಯ್ಕರ ಬಹುಮಾನ ಪಡೆದುಕೊಂಡರು. ಹಿರಿಯ ಕವಿ ನಾಗೇಂದ್ರ ನಾಯಕ ತೊರ್ಕೆ, ಸಂಗೀತ ನಿರ್ದೇಶಕ ನಾಗರಾಜ ಜಾಂಬಳೇಕರ ನಿರ್ಣಾಯಕರಾಗಿದ್ದರು.