ದಾಂಡೇಲಿ: ತಾಲೂಕಿನ ಬಡಕಾನಶಿರಡಾ/ಕೋಗಿಲಬನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಡಕಾನಶಿರಡಾ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಕಳೆದ 6 ತಿಂಗಳುಗಳಿಂದ ಅಂಗನವಾಡಿ ಶಿಕ್ಷಕಿಯಿಲ್ಲದೇ ಅಂಗನವಾಡಿ ಕೇಂದ್ರವನ್ನು ಸಹಾಯಕಿಯೆ ನಡೆಸುವಂತಾಗಿದೆ.
ಅಂಗನವಾಡಿ ಸಹಾಯಕಿ ಮಕ್ಕಳಿಗೆ ಮಧ್ಯಾಹ್ನದ ಆಹಾರವನ್ನು ತಯಾರಿ ಮಾಡುವುದಾ, ಮಕ್ಕಳ ಚಲನವಲನವನ್ನು ನೋಡುವುದಾ, ಮಕ್ಕಳಿಗೆ ಆಟ ಪಾಠವನ್ನು ಕಲಿಸುವುದಾ ಹೀಗೆ ನೂರೆಂಟು ಪ್ರಶ್ನೆಗಳು ಪುಟಾಣಿ ಮಕ್ಕಳ ಪಾಲಕರದ್ದಾಗಿದೆ.
ಇಲ್ಲಿಯ ಅಂಗನವಾಡಿ ಕೇಂದ್ರದ ಶಿಕ್ಷಕಿಯನ್ನು ಬೇರೆಡೆಗೆ ಹೆಚ್ಚುವರಿಯಾಗಿ ನಿಯೋಜಿಸುವ ಮೂಲಕ ಬಡಕಾನಶಿರಡಾದ ಪುಟಾಣಿ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬಡವಾಗಿಸಲು ಹೊರಟ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಡೆಯ ಬಗ್ಗೆ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಇದ್ದ ಅಂಗನವಾಡಿ ಶಿಕ್ಷಕಿಯನ್ನು ಮರು ನಿಯೋಜಿಸಬೇಕೆಂದು ಆಗ್ರಹಿಸಿ ಶುಕ್ರವಾರ ಸ್ಥಳೀಯರು ಸೇರಿ ಗ್ರಾ.ಪಂ ಸದಸ್ಯರಾದ ಗೋಕುಲ ಮಿರಾಶಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.