• Slide
    Slide
    Slide
    previous arrow
    next arrow
  • ಆಲಸ್ಯವು ದೈಹಿಕ,ಮಾನಸಿಕ ಅಹಿತಕ್ಕೆ ಕಾರಣ:ಗಂಗಾಧರೇಂದ್ರ ಸ್ವಾಮೀಜಿ

    300x250 AD

    ಶಿರಸಿ: ಆಲಸ್ಯ ಮೇಲ್ನೋಟಕ್ಕೆ ಹಿತ ಅನಿಸಿದರೂ ಅನೇಕ ಅಹಿತ ಉಂಟು ಮಾಡುತ್ತದೆ.ಅನ್ಯಾಯದ ಹಣದಿಂದಲೂ ಅನಾರೋಗ್ಯ ಬರುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆತಂಕಿಸಿದರು.

    ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯವ್ರತಾಚರಣೆಯಲ್ಲಿ ಮೆಣಸಿ ಸೀಮೆ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಆಶೀರ್ವಚನನೀಡಿದರು. ಈಚೆಗಿನ ದಿನಗಳಲ್ಲಿ ಎಲ್ಲ ಕಡೆ ಅನಾರೋಗ್ಯದ ವಾತಾವರಣ ಇದೆ. ಅನಾರೋಗ್ಯದ ವಾತಾವರಣ ಎಲ್ಲ ಕಡೆ ವ್ಯಾಪಕವಾಗುತ್ತಿದೆ. ಇದರ ನಿಯಂತ್ರಣಕ್ಕೆ ನಾವೇನು ಮಾಡಬೇಕು ಎಂಬುದನ್ನೂ ಚಿಂತಿಸಬೇಕಾಗಿದೆ. ಇದರ ನಿಯಂತ್ರಣಕ್ಕೆ ಅನೇಕ ವಿಷಯಗಳು ಇವೆ. ಮಳೆಗಾಲದ ದಿನಗಳಲ್ಲಿಸತತ ಮಳೆ ಸುರಿದರೂ ಅನಾರೋಗ್ಯದ ವಾತಾವರಣ ಬರುತ್ತದೆ ಎಂದ ಶ್ರೀಗಳು,  ನಮ್ಮ ನಿಷ್ಕ್ರೀಯತೆ, ಆಲಸ್ಯವೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಚಟುವಟಿಕೆ ಇಲ್ಲದಿದರುವರೂ ಕಾರಣವಾಗುತ್ತದೆ. ಆಲಸ್ಯ ಮೇಲ್ನೋಟಕ್ಕೆ ಹಿತ ಅನಿಸಿದರೂ ಅನೇಕ ಅಹಿತ ಉಂಟು ಮಾಡುತ್ತದೆ ಎಂದರು.

    ಆಲಸ್ಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾನಸಿಕ ಸ್ಥಿತಿ ಕೂಡ ಕಾರಣವಾಗುತ್ತದೆ. ಕೊರೋನಾ ಬಳಿಕ ರೋಗ ಎಲ್ಲರಲ್ಲೂ ಭಯ ಸೃಷ್ಟಿಸಿದೆ. ಮನಸ್ಸಿನ ಭಯ ನಿವಾರಣೆ ನಾವೇ ಕಂಡುಕೊಳ್ಳಬೇಕು. ಭಯದ ನಿವಾರಣೆಗೆ ಬೇರೆ ಉಪಾಯಗಳಿಲ್ಲ. ಭಯದ ನಿವಾರಣೆಗೆ ಗುಳಿಗೆ ಇದ್ದರೂ ಇಂಜಕ್ಷನ್ ಇಲ್ಲ. ನಮ್ಮ ಮನಸ್ಸಿನ ಭಯ ಸ್ಥಿತಿ ನಾವೇಅರ್ಥ ಮಾಡಿಕೊಂಡು ನಾವೇ ಸ್ವತಃ ಭಯವನ್ನು ಭಗವಂತನ ಆರಾಧನೆಯ ಮೂಲಕ ಕರಗಿಸಿಕೊಳ್ಳಬೇಕು.ನಿರ್ಭೀತಿ ಸಂಕಲ್ಪ ಮಾಡಿಕೊಳ್ಳಬೇಕು ಎಂದ ಶ್ರೀಗಳು, ಹೆಚ್ಚು ಸಮಯ ದೇವರ ಪ್ರಾರ್ಥನೆ ಮಾಡಿದರೆ ಭಯದ ಮನಸ್ಥಿತಿ ಹೋಗುತ್ತದೆ. ಭಯದ ಆತಂಕ ಸ್ಥಿತಿಯಿಂದ ವಾಪಸ್ ಬಾರದೇ ಹೋದರೆ ಅನಾರೋಗ್ಯ ಕಾಡುತ್ತದೆ ಎಂದರು. ಸ್ವಸ್ಥ ಬದುಕಿಗೆ ಅರ್ಥ ಶುದ್ಧಿ ಕೂಡ ಮಹತ್ವದ್ದಿದೆ. ಹಣದ ಸಂಪಾದನೆ ಧರ್ಮ, ನ್ಯಾಯಮೀರಿ ಹೋಗುತ್ತದೆ ಎಂದಾರರೆ ಅದೂ ಅಪಾಯವೇ. ಅಧರ್ಮ, ಅನ್ಯಾಯ ಗೊತ್ತಿದ್ದರೂ ಹಣಸಿಗುತ್ತದೆ ಎಂಬ ಕಾರಣಕ್ಕೆ ಮನಸ್ಸು ಅನ್ಯಾಯ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಬರಬಹುದು.ಇದು ಸರಿಯಲ್ಲ. ಶಾಸ್ತ್ರವೂ ಇದನ್ನೇ ಹೇಳುತ್ತದೆ, ನಾವೂ ಅನೇಕ ಕಂಡಿದ್ದೇವೆ. ಯಾರುಅನ್ಯಾಯ, ಅಧರ್ಮ ದಾರಿಯಲ್ಲಿ ಹಣ ಸಂಪಾದನೆ ಮಾಡುವರೋ ಹಣದಿಂದಲೂ ಅನಾರೋಗ್ಯ ಬರುತ್ತದೆಎಂದು ವಿಶ್ಲೇಷಣೆ ಮಾಡಿದರು.ಯಾವುದೇ ಪಾಪ. ಪುಣ್ಯ ಉತ್ಪಟವಾದಾಗ ಫಲ ಕೂಡ ಬೇಗ ಕೊಡುತ್ತದೆ. ನಮ್ಮ ಒಳಗಿನ ಭಾವತೀವ್ರತೆಯಿಂದ ಅದು ತೀಕ್ಷ್ಮವಾಗುತ್ತದೆ.  ಪಾಪದ ಫಲ ದುಃಖ, ಪುಣ್ಯದ ಫಲ ನೆಮ್ಮದಿ ಎಂದಶ್ರೀಗಳು, ಕೊರೋನಾ ಹೊಸ ಜೀವನ ಶೈಲಿ ಕಲಿಸಿದೆ. ವ್ಯಾಯಾಮ, ವಿಶ್ರಾಮಗಳ ಸಮತೋಲನ ಕಂಡುಕೊಳ್ಳಬೇಕು ಎಂದ ಶ್ರೀಗಳು, ಆಹಾರ ನಿಯಮ, ನಿದ್ದೆಯ ನಿಯಮ ಪಾಲಿಸಬೇಕು. ಆಹಾರಪಾಲನೆ ಮಾಡದವನು ಎಷ್ಟು ಬುದ್ಧಿವಂತ ಆದರೂ ಅನಾರೋಗ್ಯ ಬರುತ್ತದೆ.ಆಹಾರ ಪದ್ಧತಿ ಎಡವಟ್ಟು ಸರಿ ಮಾಡಿಕೊಳ್ಳಬೇಕು. ಆರೋಗ್ಯ ರಕ್ಷಿಸಿಕೊಳ್ಳಲು ಬೇಗ ಮಲಗಿಬೇಗ ಏಳಬೇಕು. ತಡೆದು ಮಲಗಿ, ಬೇಗ ಏಳುವದೂ ಸರಿಯಲ್ಲ. ತಡೆದು ಮಲಗಿ, ತಡೆದು ಏಳುವದೂ ಸರಿಯಲ್ಲ ಎಂದರು.

    300x250 AD

    ಸೀಮಾ ಪ್ರಮುಖರಾದ ರಮಾಕಾಂತ ಹೆಗಡೆ ಮಂಡೆಮನೆ, ರಾಜಾರಾಮ ಹೆಗಡೆ ಸೊಣಗಿಮನೆ, ದಿನೇಶ ಹೆಗಡೆ ಮಣ್ಮನೆ, ಜಯಲಕ್ಷ್ಮೀ ಹೆಗಡೆ, ರಾಜೇಶ್ವರಿ ಭಟ್ಟ ಧೋರಣಗಿರಿ ಇತರರು ಇದ್ದರು.

    ಗ್ರಹಸ್ಥನಿಗೂ  ಬ್ರಹ್ಮಚರ‍್ಯ ಇದೆ. ಈಚೆಗೆ ಇದು ಲೋಪ ಆಗುತ್ತಿದೆ. ನಗರದಲ್ಲಿದ್ದ ಈ ಲೋಪ ಹಳ್ಳಿಗಳಿಗೂ ಬಂದಿದೆ. ಬ್ರಹ್ಮಚರ‍್ಯ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು…..ಸ್ವರ್ಣವಲ್ಲೀ ಶ್ರೀ

    Share This
    300x250 AD
    300x250 AD
    300x250 AD
    Leaderboard Ad
    Back to top