Slide
Slide
Slide
previous arrow
next arrow

ಹುತ್ಕಂಡ ಶಾಲೆಗೆ ಪ್ರಿನ್ಸಿಪಲ್ ಸಿಟಿಇ ಟೀಮ್ ಭೇಟಿ: ಶಾಲಾ ಭೌತಿಕ ವ್ಯವಸ್ಥೆ ಪರಿಶೀಲನೆ

300x250 AD

ಯಲ್ಲಾಪುರ: ಬೆಳಗಾವಿಯ ಪ್ರಿನ್ಸಿಪಲ್ ಸಿಟಿಇ ಎಂ.ಎಂ.ಸಿಂಧೂರ ಅವರ ನೇತೃತ್ವದ ತಜ್ಞರ ತಂಡ ತಾಲೂಕಿನ ಹುತ್ಕಂಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು.

ಶಾಲಾ ಭೌತಿಕ ವ್ಯವಸ್ಥೆ ಸರ್ಕಾರದ ಅನುದಾನದ ಸದ್ಬಳಕೆ ಕುರಿತಂತೆ ಪರಿಶೀಲನೆ ಮತ್ತು ವೀಕ್ಷಣೆಗೆ ಬಂದಿದ್ದ ಈ ತಂಡ ಹುತ್ಕಂಡ ಹಿರಿಯ ಪ್ರಾಥಮಿಕ  ಶಾಲೆಗೆ ಭೇಟಿ ನೀಡಿ, ಗುಣಮಟ್ಟದ ಹೊಸ  ಕಟ್ಟಡ, ಮುಖ್ಯಾಧ್ಯಾಪಕರ ಕೊಠಡಿ ವೀಕ್ಷಿಸಿ ಅನುದಾನದ ಸಮರ್ಪಕ ಬಳಕೆ, ಶಾಲಾ ಆವರಣದ ಸುಸಜ್ಜಿತ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.

300x250 AD

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ತಾಲೂಕಿನ ಶೈಕ್ಷಣಿಕ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಇದಕ್ಕೂ ಪೂರ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಂಡ ಭೇಟಿ ನೀಡಿತು.

Share This
300x250 AD
300x250 AD
300x250 AD
Back to top