ಶಿರಸಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಇದೇ ಬರುವ ಸಪ್ಟೆಂಬರ್ 5 ಶಿಕ್ಷಕ ದಿನಾಚರಣೆಯಂದು ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಲಾಗುವುದು.ಸ್ಪರ್ಧೆಗಳು ಹಾಗೂ ವಿಜೇತರ ವಿವರಗಳು ಈ ಕೆಳಗಿನಂತಿವೆ:
ಪ್ರಬಂಧ ಸ್ಪರ್ಧೆಯಲ್ಲಿ ತೆರಕನಳ್ಳಿ ಶಾಲೆಯ ರಮೇಶ್ ಟಿ. ಹೆಗಡೆ ಪ್ರಥಮ,ದ್ವಿತೀಯ HPS ನಂ.೫ ಶಾಲೆಯ ಶ್ರೀಮತಿ ಪರ್ತಿಶ್ವರಿ, ತೃತೀಯ HPS ನಂ,೨ ಶಾಲೆಯ ಶ್ರೀಮತಿ ಸಂಧ್ಯಾ ನಾಯ್ಕ್
ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ H.P.S. ನಂ. 4 ಶಿರಸಿಯ ಸಂತೋಷ್ ಶೆಟ್ಟಿ,ದ್ವಿತೀಯ HPS ಉಲ್ಲಾಳಕೊಪ್ಪದ ಶ್ರೀಮತಿ ಸಂಧ್ಯಾ ಭಟ್ , ತೃತೀಯ HPS ಕಳವೆಯ ಶ್ರೀಮತಿ ಸರ್ವೇಶ್ವರಿ ಶೆಟ್ಟಿ
ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ತೆರಕನಳ್ಳಿ ಶಾಲೆಯ ರಮೇಶ ಟಿ. ಹೆಗಡೆ,ದ್ವಿತೀಯ H.P.S. ಬೆಳಲೆಯ ಸುಮನಾ ಹೆಗಡೆ,ತೃತೀಯ H.P.S. ಸರಗುಪ್ಪದ ಜನಾರ್ಧನ ಮೊಗೇರ
ಪ್ರಬಂಧ (ಉರ್ದು) ಪ್ರಥಮ H.P.S.ಉರ್ದು ನೆಹರೂ ನಗರದ ಶ್ರೀಮತಿ ಸಾಯೇರಾ ಬಾನು ಶೇಖ್, ದ್ವಿತೀಯ H.P.S.ಉರ್ದು ರೇವಣಕಟ್ಟಾದ
ಶ್ರೀಮತಿ ಮೊಬಿನಾ ಶೇಖ್, ತೃತೀಯ H.P.S.ಉರ್ದು ರಾಮನ್‌ಬೈಲ್ ಶ್ರೀಮತಿ ಜೈನಭಿ ಪಠಾಣ್
ಆಶುಭಾಷಣ (ಉರ್ದು) ಪ್ರಥಮ ಸ್ಥಾನ L.P.S. ಅಂಡಗಿ ಅರ್ಷದ್ ಶೇಖ್, ದ್ವಿತೀಯ H.P.S.ಉರ್ದು ರಾಮನ್‌ಬೈಲ್ ಜೈನಭಿ ಪಠಾಣ್,ತೃತೀಯ L.P.S.ಉರ್ದು ಇಸಳೂರು ಅಬ್ದುಲ್ ಮುನಾಫ ಜಲಗೇರಿ
ಗುಂಪು ಸ್ಪರ್ಧೆ
ದೇಶಭಕ್ತಿಗೀತೆಯಲ್ಲಿ ಪ್ರಥಮ H.P.S. ಆಝಾದ್ ನಗರದ ಶಿರಸಿ ನಗರ ಪಶ್ಚಿಮ CRC ತಂಡ, ದ್ವಿತೀಯ ಶಿರಸಿ ನಗರ ಪೂರ್ವತಂಡ,ತೃತೀಯ ಸಿ.ಆರ್.ಸಿ. ನೆಗ್ಗು ತಂಡ.