• Slide
  Slide
  Slide
  previous arrow
  next arrow
 • ಚಂದಗುಳಿಯಲ್ಲಿ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ಸಂಪನ್ನ

  300x250 AD

  ಯಲ್ಲಾಪುರ: ಗಣೇಶ ಚತುರ್ಥಿ ಪ್ರಯುಕ್ತ ತಾಲೂಕಿನ ಚಂದಗುಳಿ ಸಿದ್ಧಿ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಬುಧವಾರ ರಾತ್ರಿ ಪ್ರಸಿದ್ಧ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ, ಅನಂತ ಹೆಗಡೆ ದಂತಳಿಗೆ, ವಿ.ವೆಂಕಟ್ರಮಣ ಭಟ್ಟ, ಮದ್ದಲೆವಾದಕರಾಗಿ ಶಂಕರ ಭಾಗ್ವತ, ಗಣಪತಿ ಭಾಗ್ವತ ಕವಾಳೆ ಭಾಗವಹಿಸಿದ್ದರು. 

  ಎಂ.ಎನ್.ಹೆಗಡೆ ಹಳವಳ್ಳಿ, ಮೋಹನ ಹೆಗಡೆ ಹೆರವಟ್ಟಾ, ಡಾ.ಡಿ.ಕೆ.ಗಾಂವ್ಕಾರ, ರಾಮಕೃಷ್ಣ ಭಟ್ಟ ಮಳಲಗಾಂವ, ಡಾ.ಮಹೇಶ ಭಟ್ಟ ಇಡಗುಂದಿ, ಡಾ.ಶಿವರಾಮ ಭಾಗ್ವತ ಮಣ್ಕುಳಿ, ಗೋಪಾಲಕೃಷ್ಣ ಭಟ್ಟ ಕುಂಕಿಪಾಲ ಅರ್ಥಧಾರಿಗಳಾಗಿ ಪಾಲ್ಗೊಂಡಿದ್ದರು. ಮೊಕ್ತೇಸರ ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ಕಲಾವಿದರನ್ನು ಗೌರವಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top