ಶಿರಸಿ: ತಾಲೂಕಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಚಾಲಿ ಅಡಿಕೆ ಸೊಲಿಯುವಾಗ ಮೂರು ಕಣ್ಣುಗಳ ಅಡಿಕೆ ಸಿಕ್ಕಿದ್ದು,ಇದು ತುಂಬಾ ಅಪರೂಪ. ಶ್ರೀಗೌರಿ ಹಬ್ಬದ ಮುನ್ನಾ ದಿನ ಚಾಲಿ ಸೊಲಿಯುವಾಗ ಸಿಕ್ಕಿದ್ದು, ಅವರು ಅದನ್ನು ತುಂಬಾ ಪ್ರಾಮಾಣಿಕವಾಗಿ ಮನೆಯೊಡತಿಗೆ ತಲುಪಿಸಿ , ಸನ್ನಡತೆಗೆ ಪಾತ್ರರಾಗಿದ್ದಾರೆ.ಇವರ ನಂಬಿಕೆಯ ಕೆಲಸಕ್ಕೆ ಪಟೇಲರ ಮನೆಯವರು ಸಂತಸ ವ್ಯಕ್ತಪಡಿಸಿದರು,
ಶ್ರೀ ಗೌರಿ ಮತ್ತು ಗಣೇಶನೊಂದಿಗೆ ಈ ವರ್ಷ ಅನಿರೀಕ್ಷಿತವಾಗಿ ಆಗಮಿಸಿದ ತ್ರಿನೇತ್ರನನ್ನೂ ಪೀಠದಲ್ಲಿ ಇಟ್ಟು ಪೂಜೆ ಮಾಡಲು ಮನೆಯವರು ಉತ್ಸುಕರಾಗಿದ್ದಾರೆ.
ಶ್ರೀ ಗಣೇಶೋತ್ಸವಕ್ಕೆ ತ್ರಿನೇತ್ರನ ಸಾನ್ನಿಧ್ಯ
