ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಇವರ ವತಿಯಿಂದ ಪ್ರೀಮಿಯರ್ ಪಿ.ಯು ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗಾಗಿ ಎಂ.ಹೆಚ್.ಎಂ. ಕಾರ್ಯಾಗಾರ ಆಯೋಜಿಸಲಾಗಿತ್ತು.
ವಿದ್ಯಾರ್ಥಿನಿಯರಲ್ಲಿ ಶುಚಿತ್ವ ಹಾಗೂ ಶಾರೀರಿಕ ಬೆಳವಣಿಗೆಯ ತಿಳುವಳಿಕೆ ಕುರಿತು ವಿವರವಾದ ಮಾಹಿತಿಯನ್ನು ಶಿರಸಿ ರೋಟರಿ ಸಂಸ್ಥೆಯ ಡಾ.ಸುಮನ ಹೆಗಡೆ ನೀಡಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಾಗೂ ಇನ್ನಿತರ ತೊಂದರೆಗಳನ್ನು ವೈದ್ಯರಲ್ಲಿ ವೈಯಕ್ತಿಕವಾಗಿ, ಮುಕ್ತವಾಗಿ ಚರ್ಚಿಸಿ ಪರಿಹಾರವನ್ನು ಕಂಡುಕೊಂಡರು. ವೈದ್ಯ ಡಾ.ಸುಮನ ಹೆಗಡೆಯವರು ವಿದ್ಯಾರ್ಥಿನಿಯರಿಗೆ ಕೆಲವು ಉಪಯುಕ್ತ ಪರಿಕರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು, ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಸೋನಾ ಫರ್ನಾಂಡಿಸ್ ಹಾಗೂ ಸದಸ್ಯರು, ರೋರ‍್ಯಾಕ್ಟ್ ಸದಸ್ಯರು ಮತ್ತು ರೋಟರಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಿಗಾಗಿ ಎಂ.ಹೆಚ್.ಎಂ. ಕಾರ್ಯಾಗಾರ
