Slide
Slide
Slide
previous arrow
next arrow

ಬಿಕಾಂ ಪದವೀಧರ ಮಹಾಲೆಯ ಕಲಾಪ್ರೇಮಕ್ಕೆ ಸಾಕ್ಷಿಯಾದ ‘ಗಣಪ’

300x250 AD

ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಕಲಾತ್ಮಕತೆಯಿಂದ ಗಣೇಶನ  ಮಣ್ಣಿನ ಮೂರ್ತಿ ತಯಾರಿಸುವಲ್ಲಿ ಅನೇಕ ಕಲಾವಿದರು ತಾಲೂಕಿನಲ್ಲಿದ್ದಾರೆ. ಅಂತವರರಲ್ಲಿ ವಜ್ರಳ್ಳಿಯ ಸತೀಶ ಮಹಾಲೆ ಕೂಡ ಒಬ್ಬರು.

ಕಳೆದ ಒಂದು ತಿಂಗಳ ಹಿಂದಿನಿಂದ ಜೇಡಿ ಮಣ್ಣನ್ನು ತಂದು ಹದಗೊಳಿಸಿ ಭಕ್ತರ ಬೇಡಿಕೆಗೆ ತಕ್ಕಂತೆ ಆಕಾರದಲ್ಲಿ ಆಕರ್ಷಕವಾದ ಗಣೇಶ ಮೂರ್ತಿ ತಯಾರಿಸಿಕೊಡುತ್ತಿದ್ದಾರೆ.  ಮಣ್ಣಿನ ಮೂರ್ತಿಗಳನ್ನು ತಯಾರಿಸುವಾಗಿನ  ಸತೀಶರವರ ಧ್ಯಾನಸ್ಥ ಸ್ಥಿತಿ  ಮೂರ್ತಿಯ ಅಂದವನ್ನು ಹೆಚ್ಚಿಸಿದೆ.

ಬಣ್ಣಗಳ ದರ ಹೆಚ್ಚಿದ್ದರೂ ಭಕ್ತರಿಗೆ ಹೊರೆಯಾಗದಂತೆ ಮೂರ್ತಿಯನ್ನು ತಯಾರಿಸಿಕೊಡುತ್ತಾರೆ.  ಗಣೇಶ ಹಬ್ಬದ ಸಡಗರ ಇವರ ಪಾಲಿಗೆ ಮೂರ್ತಿ ತಯಾರಿಸಿಕೊಡುವ ಉತ್ಸಾಹವಾಗಿದೆ. ಮೂರು ದಶಕಗಳಿಂದ  ವೃತದ ಹಾಗೆ ಕಾಯಕನಿಷ್ಠೆಯಿಂದ  ಕಲೆಯನ್ನು ಕೇಂದ್ರೀಕರಿಸಿ ಗಮನ ಸೆಳೆಯುತ್ತಿದ್ದಾರೆ. 

300x250 AD

   ಕಟ್ಟಡದ ರಚನಾತ್ಮಕ ಕೆಲಸದಲ್ಲೂ ನೈಪುಣ್ಯತೆ ಸಾಧಿಸಿದ ಇವರು ಓದಿದ್ದು ಬಿಕಾಂ ಪದವಿ. ಇಂದು ತನಗೆ ಆಸಕ್ತಿ ಇರುವ ಕಲಾ ಮಾಧ್ಯಮದಲ್ಲಿ ಸದ್ದಿಲ್ಲದೇ ಸಾಧನೆ ಮಾಡಿದ್ದಾರೆ. ವಜ್ರಳ್ಳಿಯ ಸಾರ್ವಜನಿಕ ಗಣೇಶೋತ್ಸವದ  ದೊಡ್ಡ ಗಣೇಶಮೂರ್ತಿ ವಜ್ರಳ್ಳಿಯ ಭಾಗದಲ್ಲಿ ಸತೀಶ ಮಹಾಲೆಯವರ ಹೆಸರನ್ನು ಉತ್ತಮ ಕಲಾಕಾರನೆಂದು ದಾಖಲಿಸಿದೆ. ವಿವಿಧ ಭಂಗಿಗಳಲ್ಲಿ ಚಿತ್ರಿಸುವ ಸತೀಶರ ಮೂರ್ತಿಯ ಬಣ್ಣಗಾರಿಕೆ  ಇಡೀ ಆಕೃತಿಯ ಸೂಕ್ಷ್ಮತೆಯನ್ನು ಗಮನಸೆಳೆಯುವಂತೆ ಮಾಡುತ್ತದೆ. ಹೆಚ್ಚಿನ  ಬಣ್ಣದ ಲೇಪನಕ್ಕೆ ಬಣ್ಣದ ಮಿಶ್ರಣದ ಯಂತ್ರ ಬಳಸಿದರೂ ಕುಂಚ ಕೈಯಲ್ಲಿ ಹಿಡಿದಾಗಲೇ ಆ ಕಲೆಗೆ ಜೀವಂತಿಕೆ ಬರುವುದು ಎನ್ನುವುದು  ಸತೀಶರ ಅಭಿಮತ. 

   ಕಲಾ ನೈಪುಣ್ಯತೆಯ ಪರಂಪರೆಯ ಕಸುಬು ಮುಂದಿನ ಪೀಳಿಗೆಗೂ ಹೀಗೆ ರವಾನೆಯಾಗಬೇಕೆಂಬ ಅಭಿಲಾಷೆ ಕಲಾಕಾರ ಸತೀಶ ಮಹಾಲೆಯದ್ದು.

Share This
300x250 AD
300x250 AD
300x250 AD
Back to top