ಶಿರಸಿ: ಟೀಂ ಪರಿವರ್ತನೆ ವತಿಯಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಟೀಂ ಪರಿವರ್ತನೆ ಸಂಸ್ಥಾಪಕ ಹಿತೇಂದ್ರ ನಾಯ್ಕ ವಿತರಿಸಿದರು.
ಪಠ್ಯಪುಸ್ತಕ ವಿತರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 75ವರ್ಷಗಳು ಕಳೆದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದಿಗೂ ಶಿಕ್ಷಣ ಕ್ಕಾಗಿ ಕಷ್ಟ ಪಡುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳೇ ಭವ್ಯ ಭಾರತದ ಶಿಲ್ಪಿಗಳು. ಹಾಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರ ಮುಂದೆ ಬರಬೇಕು.ವ್ಯವಸ್ಥೆಯನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ.ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ದೇಶದ ಅರ್ಥ ವ್ಯವಸ್ಥೆ ಯ ಬಗ್ಗೆ ಮನದಟ್ಟುಮಾಡಿಕೊಡಬೇಕು. ಸಮಾಜವನ್ನು ಬದಲಾಯಿಸುವ ಮಟ್ಟದವರೆಗೆ ವಿದ್ಯಾರ್ಥಿಗಳು ಓದಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ನಾಲ್ಕಾರು ಜನರಿಗಾದರೂ ಉಪಕಾರಿಯಾಗಿ ಬದುಕಬೇಕು ಎಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ5 ಶಿರಸಿ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಬ್ಬಿಗದ್ದೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಲಳ್ಳ ಶಾಲೆಗಳ ಸುಮಾರು ಇನ್ನೂರು ವಿದ್ಯಾರ್ಥಿಗಳಿಗೆ ಪಠ್ಯ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗುಬ್ಬಿಗದ್ದೆ ಶಾಲೆಯ ಸಹ ಶಿಕ್ಷಕಿ ಸುಧಾ ನಾಯ್ಕ, ಹಾಲಳ್ಳ ಶಾಲೆಯ ಸಹ ಶಿಕ್ಷಕಿ ನಾಗರತ್ನ ನಾಯ್ಕ, ನಂ 5 ನೇ ಶಾಲೆಯ ಮುಖ್ಯಾಧ್ಯಾಪಕಿ ಯಮುನಾ ಹಾಗೂ ಸಹಶಿಕ್ಷಕರು, ಉಪಾಧ್ಯಕ್ಷ ಡಾ.ವಿನಾಯಕಭಟ್ , ಹಾಲಳ್ಳ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಉಷಾ ಭಟ್ , ಪತ್ರಕರ್ತ ಶಿವಪ್ರಸಾದ ಹಿರೇಕೈ ಹಾಗೂ ಜಯಸೂರ್ಯ ನಾಯ್ಕ ಉಪಸ್ಥಿತರಿದ್ದರು.