Slide
Slide
Slide
previous arrow
next arrow

ಲಯನ್ಸ್ ಕ್ಲಬ್ ಕರಾವಳಿಯಿಂದ ಶಾಲೆಗಳಿಗೆ ವಾಟರ್ ಫಿಲ್ಟರ್ ಕೊಡುಗೆ

300x250 AD

ಅಂಕೋಲಾ: ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಧಾಯಕ ಕಾರ್ಯಕ್ರಮ ಹಮ್ಮಿಕೊಳ್ಳುವ ತನ್ನನ್ನು ಗುರುತಿಸಿಕೊಂಡಿರುವ ಲಯನ್ಸ್ ಕ್ಲಬ್ ಕರಾವಳಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ-ಬೆಳೆಸುವ ಅಭಿಯಾನದ ಅಡಿಯಲ್ಲಿ ಹಿರೇಗುತ್ತಿಯ ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಸ್ಥೆಯ ಮಾಧ್ಯಮಿಕ ಶಾಲೆಗೆ ವಾಟರ್ ಫಿಲ್ಟರ್ ಹಾಗೂ ಸಾಣಿಕಟ್ಟಾದ ಸದ್ಗುರು ನಿತ್ಯಾನಂದ ಮಾಧ್ಯಮಿಕ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ, 2 ಲೈಬ್ರೇರಿ ಸ್ಟಾಂಡ್ ಕೊಡುಗೆಯಾಗಿ ನೀಡಿದೆ. ಈ ಎರಡು ಶಾಲೆಗಳಲ್ಲಿ ನಡೆದ ಸರಳ ಸಮಾರಂಭದಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷ ಗಣೇಶ ಶೆಟ್ಟಿ, ಈ ಕೊಡುಗೆಗಳನ್ನು ನೀಡುವ ಮೂಲಕ ನಮ್ಮ ಕ್ಲಬ್ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಲಿದೆ. ಈ ಕೊಡುಗೆಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಹೊಣೆ ಸಂಸ್ಥೆಯವರಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ನ ಮಹಾಂತೇಶ ರೇವಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ವ್ಯಕ್ತಿ ವಿಕಸದ ಕಡೆಗೆ ಕೂಡ ಗಮನ ಹರಿಸಬೇಕೆಂದರು.
ಈ ಕೊಡುಗೆಗಳ ಪ್ರಾಯೋಜಕರಾದ ಡಾ.ರಕ್ಷಿತಾ ಕರುಣಾಕರ ಹಾಗೂ ಎಸ್.ಬಿ.ನಾಯಕರ ಸಹಾಯವನ್ನು ಸ್ಮರಿಸಲಾಯಿತು. ಸಮಾರಂಭದಲ್ಲಿ ಲಾಯನ್ಸ್ ಸದಸ್ಯರಾದ ಮಹಾಂತೇಶ ರೇವಡಿ, ಎಸ್.ಆರ್. ಉಡುಪಿ, ಹಸನ್ ಶೇಖ್, ಚಾಂದ್‌ಸಿAಗ್, ಮಂಜುನಾಥ ನಾಯಕ, ಶ್ರೀನಿವಾಸ ನಾಯಕ, ಶಂಕರ ಹುಲಸ್ವಾರ ಉಪಸ್ಥಿತರಿದ್ದರು. ಈ ಕೊಡುಗೆ ನೀಡಿದ್ದಕ್ಕೆ ಮುಖ್ಯಾಧ್ಯಾಪಕರಾದ ಶಾರದಾ ನಾಯಕ ಹಾಗೂ ರೋಹಿದಾಸ ಗಾಂವಕರ ಶಾಲೆಯ ಪರವಾಗಿ ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top