ನವದೆಹಲಿ: ಮುಂದಿನ 7 ರಿಂದ 10 ವರ್ಷಗಳಲ್ಲಿ ಭಾರತವು ಒಟ್ಟು 400 ಮಿಲಿಯನ್ ವಿಮಾನ ಪ್ರಯಾಣಿಕರನ್ನು ಹೊಂದುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಹೇಳಿದ್ದಾರೆ.
ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಪ್ರಚಂಡ ಬೆಳವಣಿಗೆಯ ಅವಕಾಶಗಳಿವೆ ಮತ್ತು ಐದು ವರ್ಷಗಳಲ್ಲಿ 1,200 ವಿಮಾನಗಳ ಸಮೂಹವನ್ನು ಹೊಂದುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ಪೂರ್ವ ಸೇರಿದಂತೆ ದೇಶೀಯ ಮತ್ತು ಅಂತರಾಷ್ಟ್ರೀಯ ಸುಮಾರು 200 ಮಿಲಿಯನ್ ವಿಮಾನ ಪ್ರಯಾಣಿಕರಿದ್ದರು ಮತ್ತು ಮುಂದಿನ 7 ರಿಂದ 10 ವರ್ಷಗಳಲ್ಲಿ ಈ ಸಂಖ್ಯೆ 400 ಮಿಲಿಯನ್‌ಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದ್ದಾರೆ.
ಉದ್ಯಮ ಸಂಸ್ಥೆ ಅಸೋಚಾಮ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಸಿಂಧಿಯಾ, 2026 ರ ವೇಳೆಗೆ ದೇಶವು ಹೆಲಿಪೋರ್ಟ್‌ಗಳು ಮತ್ತು ಏರೋಡ್ರೋಮ್‌ಗಳು ಸೇರಿದಂತೆ ಒಟ್ಟು 220 ವಿಮಾನ ನಿಲ್ದಾಣಗಳನ್ನು ಹೊಂದುವ ನಿರೀಕ್ಷೆಯಿದೆ ಎಂದಿದ್ದಾರೆ.
ದೇಶದ ನಾಗರಿಕ ವಿಮಾನಯಾನ ಕ್ಷೇತ್ರವು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಬಳಲಿದ ನಂತರ ಈಗ ಚೇತರಿಕೆಯ ಹಾದಿಯಲ್ಲಿದೆ ಎಂದಿದ್ದಾರೆ.
ಕೃಪೆ:: http://news13.in