• Slide
    Slide
    Slide
    previous arrow
    next arrow
  • ಅಂಡಗಿಯಲ್ಲಿ ಕೃಷಿ ಉತ್ಪನ್ನ ಶೈತ್ಯಾಗಾರ ಸ್ಥಾಪನೆಗೆ ಸಿದ್ಧತೆ

    300x250 AD

    ಶಿರಸಿ: ತಾಲ್ಲೂಕಿನ ಅಂಡಗಿ ಗ್ರಾಮದಲ್ಲಿ ಜಿಲ್ಲೆಯ ಮೊದಲ ಕೃಷಿ ಉತ್ಪನ್ನ ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಸ್ಥಾಪನೆಗೆ ಸಿದ್ಧತೆ ಗರಿಗೆದರಿದೆ. ಕೃಷಿ ಇಲಾಖೆಯಿಂದ 79.5 ಕೋಟಿ ಅನುದಾನ ಇದಕ್ಕಾಗಿ ಮಂಜೂರಾಗಿದೆ.

    ಅನಾನಸ್, ಶುಂಠಿ ಸೇರಿದಂತೆ ಹಣ್ಣು ಬೆಳೆ ಹೆಚ್ಚು ಬೆಳೆಯುವ ಬನವಾಸಿ ಭಾಗದಲ್ಲಿ ಫಸಲು ಹಾಳಾಗದಂತೆ ದಾಸ್ತಾನಿಟ್ಟುಕೊಳ್ಳಲು ಶೈತ್ಯಾಗಾರ ಸ್ಥಾಪಿಸುವಂತೆ ರೈತರಿಂದ ಬೇಡಿಕೆ ಇತ್ತು. ಎರಡು ವರ್ಷದ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಶಿರಸಿಗೆ ಬಂದ ವೇಳೆ ನೀಡಿದ್ದ ಭರವಸೆ ಈಗ ಕೈಗೂಡುವ ಹಂತಕ್ಕೆ ಬಂದಿದೆ.

    ಅಂದು ಸಚಿವರು ಶೈತ್ಯಾಗಾರ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶ ಇದ್ದರೆ ಅನುದಾನ ಒದಗಿಸುವ ಮಾತನ್ನಾಡಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ ಸೂಕ್ತ ಜಾಗ ಹುಡುಕಾಟ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅಂತಿಮವಾಗಿ ಅಂಡಗಿ ಗ್ರಾಮದ ಸರ್ವೆ ನಂಬರ್ 169ರಲ್ಲಿರುವ ಎರಡು ಭೂಮಿ ಗುರುತಿಸಿ ಇಲ್ಲಿಯೇ ಶೈತ್ಯಾಗಾರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

    ‘ಎರಡು ವರ್ಷಗಳಿಂದ ಜಾಗ ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿದೆ. ಸದ್ಯ ಈ ಜಾಗದ ಮಾಲಿಕತ್ವ ಕೃಷಿ ಇಲಾಖೆ ಶಿರಸಿ ತಾಲ್ಲೂಕು ಸಹಾಯಕ ನಿರ್ದೇಶಕರ ಹೆಸರಿಗೆ ಬದಲಿಸುವ ಪ್ರಕ್ರಿಯೆ ನಡೆದಿದೆ. ಜಿಲ್ಲೆಯಲ್ಲಿ ಅನಾನಸ್‌ನಂತಹ ಹಣ್ಣು ಬೆಳೆಯುವ ಬನವಾಸಿ ಹೋಬಳಿಯಲ್ಲೇ ಶೈತ್ಯಾಗಾರ ಸ್ಥಾಪಿಸಬೇಕು ಎಂಬ ಬಲವಾದ ಆಗ್ರಹವಿತ್ತು. ಇದಕ್ಕಾಗಿ ಅಂಡಗಿ ಗ್ರಾಮವನ್ನು ಆಯ್ಕೆ ಮಾಡಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

    ‘ಕೃಷಿ ಉತ್ಪನ್ನಗಳನ್ನು ಕೆಡದಂತೆ ದಾಸ್ತಾನಿಟ್ಟುಕೊಳ್ಳಲು ಶೈತ್ಯಾಗಾರ ಸ್ಥಾಪನೆಗೆ 9.5 ಕೋಟಿ ಬಿಡುಗಡೆಯಾಗಿದೆ. ಕಟ್ಟಡ ನಿರ್ಮಾಣ, ಸೌಲಭ್ಯಗಳ ಅಳವಡಿಕೆ ಕಾಮಗಾರಿಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್ ನಡೆಸಲಿದೆ. ಸೈತ್ಯಾಗಾರ ಸ್ಥಾಪನೆ ಬಳಿಕ ಅದನ್ನು ಕರಷಿ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಟಿ.ನಟರಾಜ್ ಮಾಹಿತಿ ನೀಡಿದರು.

    ‘ತೋಟಗಾರಿಕಾ ಬೆಳೆಗಳಾದ ಅನಾನಸ್, ಶುಂಠಿ, ಬಾಳೆ ಮುಂತಾದವುಗಳನ್ನು ದಾಸ್ತಾನಿಡಲು ಶೈತ್ಯಾಗಾರ ಬಳಕೆಯಾಗಲಿದ್ದು, ಇದರಿಂದ ಸವಿರಾರು ರೈತರಿಗೆ ಉಪಯುಕ್ತವಾಗಲಿದೆ’ ಎಂದು ತಿಳಿಸಿದರು.

    300x250 AD

    ರಫ್ತು ಪ್ರಯೋಗಾಲಯವೂ ಅಂಡಗಿಯಲ್ಲೇ! ಬನವಾಸಿ ಹೋಬಳಿಯಲ್ಲಿ ಕೃಷಿ ಉತ್ಪನ್ನ ರಫ್ತು ಪ್ರಯೋಗಾಲಯ ಸ್ಥಾಪಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತ ಉತ್ಪಾದಕ ಸಂಘಗಳ ಸಮಾವೇಶದಲ್ಲಿ ಭರವಸೆ ನೀಡಿದ್ದಾರೆ. ಇದು ಬನವಾಸಿ ಸೇರಿದಂತೆ ಜಿಲ್ಲೆಯ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

    ‘ಪ್ರಯೋಗಾಲಯ ಸ್ಥಾಪನೆಯ ಅಗತ್ಯತೆಯ ಬಗ್ಗೆ ಹಿಂದಿನಿಂದಲೂ ಬೇಡಿಕೆ ಇತ್ತು. ಸಚಿವರು ಭರವಸೆ ನೀಡಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಅಂಡಗಿ ಗ್ರಾಮದಲ್ಲಿ ಎರಡು ಎಕರೆ ಜಾಗವನ್ನು ಶೈತ್ಯಾಗಾರಕ್ಕೆ ಮೀಸಲಿಡಲಾಗಿದ್ದು, ಅದರಲ್ಲಿ ಕೇವಲ 2500 ಚದರ ಮೀ. ವಿಸ್ತೀರ್ನದ ಜಾಗ ಮಾತ್ರ ಅದಕ್ಕೆ ಬಳಕೆಯಾಗಲಿದೆ. ಉಳಿದ ಜಾಗದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಬಳಕೆ ಆಗಬಹುದು’ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

    ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟು ಶೈತ್ಯಾಗಾರ, ಕೃಷಿ ಉತ್ಪನ್ನ ಪ್ರಯೋಗಾಲಯ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಮಾಡಿದ್ದು, ಅದನ್ನು ಪುರಸ್ಕರಿಸಲಾಗಿದೆ…ಶಿವರಾಮ ಹೆಬ್ಬಾರ

    Share This
    300x250 AD
    300x250 AD
    300x250 AD
    Leaderboard Ad
    Back to top