• Slide
    Slide
    Slide
    previous arrow
    next arrow
  • ಮಟೀರಿಯಲ್ ಸೈನ್ಸ್ ವಿಭಾಗದಲ್ಲಿ ಉಷಾ ಭಟ್’ಗೆ ಡಾಕ್ಟರೇಟ್ 

    300x250 AD

    ಶಿರಸಿ: ಬೆಂಗಳೂರಿನ ಜವಾಹರಲಾಲ್ ನೆಹರೂ ಸಂಶೋಧನಾ ಕೇಂದ್ರದಲ್ಲಿ ಮಟೀರಿಯಲ್ ಸೈನ್ಸ್ ವಿಭಾಗದಲ್ಲಿ ನಡೆಸಿದ ಸಂಶೋಧನೆಗೆ ಉಷಾ ಭಟ್ಟ ಅವರಿಗೆ ಡಾಕ್ಟರೇಟ್  ಪದವಿ ಲಭಿಸಿದೆ. 

    ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ವಿಷಯದಲ್ಲಿ ” ಕ್ವಾಂಟಿಟೇಟಿವ್ ಇಮೇಜಿಂಗ್ ಅಂಡ್ ಅಲ್ಟರ್ನೇಟಿವ್ ಪ್ರಪೋಸಲ್ಸ್ ಆನ್ ಇಮೇಜ್ ಸಿಮಿಲೇಶನ್ ಅಂಡ್ ರೀಕನ್ಸ್ಟ್ರಕ್ಷನ್ ಇನ್ ಆಟೋಮಿಕ್ ರೆಸೊಲ್ಯೂಷನ್ ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ” ಎಂಬ ಪ್ರಬಂಧ ಮಂಡಿಸಿದ್ದು ಅದಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

    300x250 AD

    ತಾಲೂಕಿನ ಸಾಲ್ಕಣಿಯ ಶ್ರೀ ಲಕ್ಷ್ಮೀನೃಸಿಂಹ ಸಂಸ್ಕ್ರತ ಪಾಠಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವಿದ್ವಾನ್ ಮಂಜುನಾಥ ಭಟ್ಟ ಹಾಗೂ ವಿದುಷೀ ಸುಮಂಗಲಾ ಭಟ್ಟ ದಂಪತಿಗಳ  ಪುತ್ರಿಯಾದ ಇವರು ಸುಮಂತ್ ಹೆಗಡೆ ಸೂರಿಮನೆ ಅವರ ಪತ್ನಿ. ಚುಟುಕು, ಕವನ ರಚನೆ, ವೀಣಾ ವಾದನ,  ಹೀಗೆ ಬಹುಮುಖ ಪ್ರತಿಭೆಯುಳ್ಳ ಇವರು ಭರತನಾಟ್ಯದಲ್ಲಿ ವಿದ್ವತ್ ಪದವಿಯನ್ನೂ ಪಡೆದಿದ್ದಾರೆ. ಮಹಾಪ್ರಬಂಧ ಪರೀಕ್ಷಕರಲ್ಲೊಬ್ಬರಾದ ಜರ್ಮನಿಯ ಖ್ಯಾತ ವಿಜ್ಞಾನಿ ರಾಫೆಲ್ ಬೊರ್ಕೊಸ್ಕಿ ಅವರು “ನ್ಯೂ ಅಪ್ರೋಚಸ್ ಆರ್ ಹೈಲಿ ಇಂಟ್ರುಗಿಂಗ್ ಅಂಡ್ ವೆರಿ ಬೋಲ್ಡ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ, ಉನ್ನತ  ಸಂಶೋಧನೆಗಾಗಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

    Share This
    300x250 AD
    300x250 AD
    300x250 AD
    Leaderboard Ad
    Back to top