ಶಿರಸಿ: ತಾಲೂಕು ಅರೋಗ್ಯಧಿಕಾರಿಗಳ ಕಚೇರಿಯಲ್ಲಿ ಈ ಹಿಂದೆ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾಗಿ ಉತ್ತಮ ಸೇವೆ ನೀಡಿ ಸೇವಾನಿವೃತ್ತಿ ಹೊಂದಿದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುಮಿತ್ರ ನಾಯ್ಕ್, ಬಿಸಲಕೊಪ್ಪ ಆರೋಗ್ಯ ಕೇಂದ್ರದ ಪಿ.ಡಿ.ನಾಯ್ಕ್, ದಾಸನಕೊಪ್ಪ ಆರೋಗ್ಯ ಕೇಂದ್ರದ ಸವಿತಾ ಶೆಟ್ಟಿ ಅವರನ್ನು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ಆರೋಗ್ಯಧಿಕಾರಿ ಡಾ.ವಿನಾಯಕ ಭಟ್ ಅವರು ನಿವೃತ್ತರ ಕೊಡುಗೆ ಹಾಗೂ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷೆ ಸುಮಂಗಲ ಹೆಗಡೆ, ತಾಲೂಕು ಅಧ್ಯಕ್ಷೆ ಜ್ಯೋತಿ ನಾಯ್ಕ, ತಾಲೂಕು ಕಾರ್ಯದರ್ಶಿ ಸುಮನಾ ಹೆಗಡೆ ಹಾಗೂ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಹಾಜರಿದ್ದರು. ಆರೋಗ್ಯ ಶಿಕ್ಷಣ ಅಧಿಕಾರಿ ಗೌರಿ ನಾಯ್ಕ ನಿರೂಪಿಸಿದರು.