• Slide
    Slide
    Slide
    previous arrow
    next arrow
  • ಮಧುಮತಿ ನಾಯ್ಕ ಬಿಜೆಪಿಗೆ ರಾಜಿನಾಮೆ

    300x250 AD

    ಶಿರಸಿ: ಹಿಂದಿನ ದೇವನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ, ಹಾಲಿ ಸದಸ್ಯೆ ಹಾಗೂ ಮಹಿಳಾ ಮೊರ್ಚದ ಧುರಿಣೆ ಶ್ರೀಮತಿ ಮಧುಮತಿ ವಾಸುದೇವ ನಾಯ್ಕ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ದೇವನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪಕ್ಷದ ಧುರೀಣರು ಆಡಳಿತಾತ್ಮಕ ಕಾರ್ಯದಲ್ಲಿ ಕಾನೂನು ಬಾಹಿರ ಪ್ರಕ್ರೀಯೆಗೆ ಒತ್ತಾಯಿಸುವಿಕೆಗೆ, ಅವಕಾಶ ನೀಡದಿರುವುದರಿಂದ ಉದ್ದೇಶ ಪೂರ್ವಕವಾಗಿ ಪದಚ್ಯುತಿ ಮಾಡಿರುತ್ತಾರೆ ಎಂದು ಅವರು ಬಿಜೆಪಿ ಗ್ರಾಮಿಣ ಮಂಡಳ ಅಧ್ಯಕ್ಷರಿಗೆ ಬರೆದ ರಾಜಿನಾಮೆ ಪತ್ರದಲ್ಲಿ  ಉಲ್ಲೇಖಿಸಿದ್ದಾರೆ.

    300x250 AD

      ಹಿಂದುಳಿದ ಜನವಸತಿ ಪ್ರದೇಶಕ್ಕೆ ಅನುದಾನ ನೀಡದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದ್ವೇಷ ಸಾಧಿಸುವ ಉದ್ದೇಶದಿಂದ ಪದಚ್ಯುತಿಗೊಳಿಸಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಅಧಿಕಾರ ಅವಧಿಯಲ್ಲಿ ಸಹಕರಿಸಿದ ಸಿಬ್ಬಂದಿ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top