Slide
Slide
Slide
previous arrow
next arrow

ಏಕರೂಪದ ಮಾಹಿತಿ ಕ್ರೋಢೀಕರಣ ವ್ಯವಸ್ಥೆಗಾಗಿ ‘ಇರಾದ್’ ಆ್ಯಪ್

300x250 AD

ಕಾರವಾರ: ರಸ್ತೆ ಅಪಘಾತದಲ್ಲಿ ಪ್ರತಿ ವರ್ಷ ದೇಶದಲ್ಲಿ ಲಕ್ಷಾಂತರ ಜನ ಸಾವಿಗೀಡಾಗುತ್ತಾರೆ. ಅದರ ದುಪ್ಪಟ್ಟು ಜನ ಗಾಯಗೊಂಡು ನೋವು ಅನುಭವಿಸುತ್ತಾರೆ. ಹೀಗಾಗಿ ಈ ರಸ್ತೆ ಅಪಘಾತಗಳನ್ನ ಆದಷ್ಟು ಕಡಿಮೆ ಮಾಡಲು, ಇದರಿಂದ ಉಂಟಾಗುತ್ತಿರುವ ಸಾವು- ನೋವುಗಳನ್ನು ತಡೆಯಲು ದೇಶದಾದ್ಯಂತ ಏಕರೂಪದ ಮಾಹಿತಿ ಕ್ರೋಢೀಕರಣ ವ್ಯವಸ್ಥೆಯೊಂದಿಗೆ, ವ್ಯವಸ್ಥೆ ಸುಧಾರಣೆಗೆ ಯೋಜನೆಗಳನ್ನ ರೂಪಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ‘ಇರಾದ್’ ಎಂಬ ಆ್ಯಪ್ ಒಂದನ್ನು ಸಿದ್ಧಪಡಿಸಿದೆ. ಈ ಮೂಲಕ ದೇಶದಲ್ಲಿನ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಭಾರತದಾದ್ಯಂತ ನಿಖರವಾದ ಮತ್ತು ಏಕರೂಪದ ರಸ್ತೆ ಅಪಘಾತದ ದತ್ತಾಂಶ ಸಂಗ್ರಹಣಾ ವ್ಯವಸ್ಥೆ ರೂಪಿಸಿದೆ.

ಇಂಟಿಗ್ರೇಟೆಡ್ ರೋಡ್ ಆಕ್ಸಿಡೆಂಟ್ ಡೇಟಾಬೇಸ್ (ಇರಾದ್) ಎಂಬುದು ಒಂದು ವೆಬ್ ಹಾಗೂ ಆ್ಯಪ್ ಬೇಸ್ಡ್ ತಂತ್ರಾಂಶವಾಗಿದೆ. ಈ ಆ್ಯಪ್ ಪೊಲೀಸ್, ಸಾರಿಗೆ, ಹೆದ್ದಾರಿ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಿದೆ. ಅಪಘಾತವಾದ ಸ್ಥಳ ಮತ್ತು ಆ ಅಪಘಾತಕ್ಕೆ ಕಾರಣಗಳನ್ನು ಗುರುತಿಸಲು ವಿವಿಧ ಡೇಟಾ ಅನಾಲಿಟಿಕ್ಸ್ ತಂತ್ರವನ್ನು ಬಳಸಿಕೊಂಡು ಈ ಇರಾದ್ ಆ್ಯಪ್‌ನಲ್ಲಿ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಲಾಗುತ್ತದೆ. ವಿಶ್ಲೇಷಣೆಯ ಔಟ್‌ಪುಟ್ ವರದಿಯನ್ನ ಆಯಾ ಇಲಾಖೆಗಳ ಮುಖ್ಯಸ್ಥರು ಹಾಗೂ ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ಡ್ಯಾಶ್‌ಬೋರ್ಡ್ಗಳಲ್ಲಿ ಪಡೆಯಲಿದ್ದು, ಈ ವರದಿಯ ಆಧಾರದಲ್ಲಿ ದೇಶದಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ.

ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹಾಗೂ ಐಐಟಿ ಮದ್ರಾಸ್ ಈ ಆ್ಯಪ್‌ನ ವಿನ್ಯಾಸ, ಅಭಿವೃದ್ಧಿ, ತರಬೇತಿ ಮತ್ತು ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ರಾಜ್ಯ/ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್ ಗಳನ್ನ ಗುರುತಿಸಿ, ಅವರ ಮೂಲಕ ಆ್ಯಪ್ ಬಳಕೆದಾರ ಇಲಾಖೆಗಳ ಅಧಿಕಾರಿ- ಸಿಬ್ಬಂದಿಗೆ ಆ್ಯಪ್ ಬಳಕೆಯ ಬಗ್ಗೆ ಈಗಾಗಲೇ ತರಬೇತಿಗಳನ್ನ ನೀಡಲಾಗುತ್ತಿದೆ. ಕರ್ನಾಟಕದ ಮಟ್ಟಿಗೆ ಈಗಾಗಲೇ ಚಿಕ್ಕಮಗಳೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಆದರೆ, ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಈ ಆ್ಯಪ್ ಎಷ್ಟು ಬಳಕೆಯಾಗಲಿ ಹಾಗೂ ಪ್ರಯೋಜನವಾಗಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ಕೋಟ್…

300x250 AD

ಅಪಘಾತಗಳಿಗೆ ಸಂಬಂಧಿಸಿದಂತೆ ‘ಇರಾದ್’ ಆ್ಯಪ್ ಅನ್ನು ಸಿದ್ಧಪಡಿಸಲಾಗಿದೆ. ಈ ಆ್ಯಪ್ ಬಳಕೆಗಾಗಿ ಪ್ರತಿ ಠಾಣೆಗಳಿಂದ ಓರ್ವ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಆ್ಯಪ್‌ನಿಂದಾಗಿ ಅಪಘಾತಗಳ ತಡೆಗೆ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ.

· ಡಾ.ಸುಮನ ಪೆನ್ನೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Share This
300x250 AD
300x250 AD
300x250 AD
Back to top