ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ನಿಮಿತ್ತ ಮರ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.19 ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ಪಟ್ಟಣ ಶಾಖೆಯ ಯಲ್ಲಾಪುರ ರಸ್ತೆ, ಅಶ್ವಿನಿ ಸರ್ಕಲ್, ಭಗತಸಿಂಗ್ ರಸ್ತೆ, ಹೊಸಪೇಟೆ ರಸ್ತೆ, ಲಯನ್ಸ ನಗರ, ಎ.ಪಿ.ಎಂ.ಸಿ, ರಾಮನಬೈಲ್, ಮಾರಿಕಾಂಬಾನಗರ, ಟಿ.ಎಸ್.ಎಸ್ ರಸ್ತೆ, ಇಂದಿರಾನಗರ, ಕರಿಗುಂಡಿ ರಸ್ತೆ, ಅಯ್ಯಪ್ಪನಗರ, ಹುಬ್ಬಳ್ಳಿ ರಸ್ತೆ, ಬನವಾಸಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಡಾನ್‌ಬಸ್ಕೊ ಚರ್ಚ ರೋಡ್’ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆದಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.
ಆ.19 ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
