• Slide
    Slide
    Slide
    previous arrow
    next arrow
  • ಶಿವಮೊಗ್ಗ ಘಟನೆ ಪೂರ್ವನಿಯೋಜಿತ:ಪ್ರಮೋದ್ ಮುತಾಲಿಕ್

    300x250 AD

    ಯಲ್ಲಾಪುರ: ದೇಶ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಮುಳುಗಿದ್ದರೆ, ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿ, ಟಿಪ್ಪು ಫೊಟೊ ಇಟ್ಟು ಗಲಭೆಗೆ ಪ್ರಚೋದನೆ ನೀಡಲಾಗಿದೆ. ಇದೇ ವೇಳೆ ಯುವಕನೋರ್ವನಿಗೆ ಚಾಕು ಇರಿದಿರುವುದು ಪೂರ್ವನಿಯೋಜಿತ ಕೃತ್ಯ. ಇದು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ.

    ಅವರು ಯಲ್ಲಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯ, ಮುಸ್ಲಿಮರ ಉದ್ಧಟತನ ಇದಕ್ಕೆಲ್ಲ ಕಾರಣವಾಗಿದೆ. ಗಲಭೆ ಎಬ್ಬಿಸುವ ಸಂಚಾಗಿದೆ. ಗಲಭೆ ಮಾಡುವವರಿಗೆ ಸರ್ಕಾರದ, ಪೊಲೀಸರ, ಜೈಲಿನ ಭಯ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರಕ್ಕೆ ಸಮಾಜದ ಸುರಕ್ಷತೆ, ಮಾನ ಮರ್ಯಾದೆ ಇದ್ದರೆ ಉಗ್ರಗಾಮಿ ಸಂಘಟನೆಗಳನ್ನು ತಕ್ಷಣ ನಿಷೇಧ ಮಾಡಿ ಅವರ ಉದ್ಧಟತನಕ್ಕೆ ಕಡಿವಾಣ ಹಾಕಬೇಕು. ಇನ್ನೂ ಮೀನಾಮೇಷ ಎಣಿಸುತ್ತಿದ್ದರೆ, ಎಷ್ಟು ಜನರ ಪ್ರಾಣ ಹರಣವಾಗಬೇಕಿದೆ ಎಂದು ಪ್ರಶ್ನಿಸಿದರು.

    300x250 AD

    ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಿ ಇಂತಹ ಕಿಡಿಗೇಡಿಗಳಲ್ಲಿ ಇಬ್ಬರನ್ನಾದರೂ ಎನ್‌ಕೌಂಟರ್ ಮಾಡಿದರೆ ಇಂತಹ ಕೃತ್ಯ ಎಸಗುವವರು ಬಾಲ ಮುದಿರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂದರು.ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಮುಖ ಬಾಬು ಬಾಂದೇಕರ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top