ಯಲ್ಲಾಪುರ: ಕುಂದರಗಿ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯಿತ್ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಸಾಮರ್ಥ್ಯ ಮತ್ತು ತಾಳ್ಮೆ ಹೆಚ್ಚಿಸಲು ಹಮ್ಮಿಕೊಳ್ಳಲಾದ ವಿನೂತನ ಕಾರ್ಯಕ್ರಮಗಳ ಅಂಗವಾಗಿ “ಗ್ರಾಮ ಚದುರಂಗ ಆಡೋಣ” ಪಂದ್ಯಾವಳಿಗೆ ಕುಂದರಗಿ ಗ್ರಾಮ ಪಂಚಾಯತ ಸದಸ್ಯ ರಾಮಕೃಷ್ಣ ಹೆಗಡೆ ಹಾಗೂ ಪ್ರಕಾಶ ನಾಯ್ಕ ಪಿ. ಡಿ. ಓ. ರವಿ ಪಟಗಾರ ಮತ್ತು ಕುಂದರಗಿ ಕ್ಲಸ್ಟರ್ ಶಿಕ್ಷಕರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು.
ಪ್ರೌಢಶಾಲಾ ವಿಭಾಗದಲ್ಲಿ ಪ್ರಗತಿ ವಿಧ್ಯಾಲಯ ವಿದ್ಯಾರ್ಥಿಗಳಾದ ಲಕ್ಷ್ಮಿನಾರಾಯಣ ದೇವಾಡಿಗ ಪ್ರಥಮ, ಸಂದೀಪ್ ದೇವಾಡಿಗ ದ್ವಿತೀಯ ಮತ್ತು ತೃತೀಯ ಸ್ಥಾನ ರಾಮದಾಸ್ ಡೊಯೀಫಡೆ ಹಾಗೂ ಹಿರಿಯರ ವಿಭಾಗದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಭರತನಹಳ್ಳಿ ವಿದ್ಯಾರ್ಥಿ ಶಶಾಂಕ್ ನಾಯ್ಕ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ತರುಣ ನಾಯ್ಕ, ಕುಂದರಗಿ ಹಿರಿಯ ಪ್ರಾಥಮಿಕ ಶಾಲೆಯ ಜೀವನ ನಾಯ್ಕ ತೃತೀಯ ಸ್ಥಾನ ಪಡೆದರು. ಈ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಯಿತು
ಈ ಸಂಧರ್ಭದಲ್ಲಿ ಕುಂದರಗಿ ಪಂಚಾಯತ ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿಗಳು ವಿವಿಧ ಶಾಲಾ ಶಿಕ್ಷಕರು ಸಿಬ್ಬಂದಿಗಳು ಊರನಾಗರಿಗರು ವಿದ್ಯಾರ್ಥಿಗಳು ಹಾಜರಿದ್ದರು