Slide
Slide
Slide
previous arrow
next arrow

ಶಿವಶರಣ ನೂಲಿ ಚಂದಯ್ಯ ಕಾಯಕಯೋಗಿ: ಡಾ.ರೇವಣಸಿದ್ದ ಶಿವಚಾರ್ಯ

300x250 AD

ಮುಂಡಗೋಡ: ಶಿವಶರಣ ನೂಲಿ ಚಂದಯ್ಯ ತಮ್ಮ ಕಾಯಕದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ತಮಗೆ ಎಷ್ಟೇ ಕಷ್ಟಗಳು ಬಂದರೂ ಸಹಿತ ಕಾಯಕವನ್ನು ಬಿಡದೆ ಕಾಯಕಯೋಗಿಯಾಗಿದ್ದರು ಎಂದು ಕಲಘಟಗಿ 12 ಮಠದ ಡಾ.ರೇವಣಸಿದ್ದ ಶಿವಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಾಡಳಿತದಿಂದ ಪಟ್ಟಣದ ಟೌನಹಾಲ್‌ನಲ್ಲಿ ನಡೆದ ಶಿವ ಶರಣ ನೂಲಿ ಚಂದಯ್ಯನವರ 915ನೇ ಜಯಂತಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ನೂಲಿ ಚಂದಯ್ಯನವರ ಸನ್ಮಾರ್ಗದಲ್ಲಿ ನಡೆಯಬೇಕು. ಸಾಮನ್ಯ ಜನರಂತೆ ಬದುಕುವುದಕ್ಕಿಂತ ಒಬ್ಬ ಯೋಗಿ ರೂಪದಲ್ಲಿ ಬದುಕುವುದು ಉತ್ತಮ. ನಾವೆಲ್ಲರೂ ಒಂದೇ ಎಂದು ಬಾಳಿದರೆ ಬದುಕು ಅಷ್ಟೇ ಸ್ವಾರಸ್ಯಕರವಾಗಿರುತ್ತದೆ ಎಂದರು.
ತಹಶೀಲ್ದಾರ ಶಂಕರ ಗೌಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿವಶರಣ ನೂಲಿ ಚಂದಯ್ಯನವರು ಅನುಭವಮಂಟಪದ ಸದಸ್ಯರಾಗಿದ್ದರು. ಅವರು ಕಾಯಕ ಯೋಗಿಯಾಗಿದ್ದರು. ಮಕ್ಕಳಿಗೆ ವಿದ್ಯಾವಂತರನ್ನಾಗಿ ಮಾಡಬೇಕು ಅಕ್ಷರ ಜ್ಞಾನ ತಾಯಿತಂದೆಯರು ತಮ್ಮ ಮಕ್ಕಳಿಗೆ ಮಾಡಿಸಬೇಕು ಎಂದರು.
ಹನಮಾಪೂರ ಕಾಳಿಕಾಂಬ ಮಠದ ಡಾ.ಸೋಮಶೇಖರ ಶಿವಚಾರ್ಯ ಮಹಾಸ್ವಾಮಿ, ಎಲ್.ಟಿ.ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಫಕ್ಕಿರಪ್ಪ ಭಜಂತ್ರಿ ಸುಶ್ರಾವ್ಯ ಶಹನಾಯಿ ನುಡಿಸಿದರು. ವೇದಿಕೆ ಮೇಲೆ ಅಶೋಕ ಚಲವಾದಿ, ಬಸವರಾಜ ಸಂಗಮೇಶ್ವರ, ಹನಮಂತಪ್ಪ ಆರೆಗೋಪ್ಪ, ಚಿದಾನಂದ ಹರಿಜನ, ಹನಮಂತ ಭಜಂತ್ರಿ, ಇಒ ಪ್ರವೀಣ ಕಟ್ಟಿ, ಪ್ರಭಾರ ಸಿಡಿಪಿಒ ದೀಪಾ ಬಂಗೇರಾ, ಪ.ಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಗ್ರೇಡ್-2 ತಹಶೀಲ್ದಾರ ಗಣಪತಿ ಭಟ್ಟ, ಎಮ್.ಎಸ್.ಕುಲಕರ್ಣಿ ಸೇರಿದಂತೆ ಸಮಾರಂಭದಲ್ಲಿ ಭಜಂತ್ರಿ, ಕೊರವ, ಕೊರಮ ಸಮಾದ ಗಣ್ಯರು ಹಾಗೂ ಸಮಾಜದ ಪ್ರಮುಖರು, ಮಹಿಳೆಯರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top