ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಹಳಿಯಾಳ ವತಿಯಿಂದ ಉಚಿತ 30 ದಿನಗಳ ಮೊಬೈಲ್ ಫೋನ್ ದುರಸ್ತಿ, ಹೌಸ್ ವಾಯರಿಂಗ್ ತರಬೇತಿ ಮತ್ತು 10 ದಿನಗಳ ಉಚಿತ ಕುರಿ ಸಾಕಾಣಿಕೆ ಮತ್ತು ತರಕಾರಿ ನರ್ಸರಿ ನಿರ್ವಹಣೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ 18ರಿಂದ 45 ವರ್ಷದೊಳಗಿನ ಗ್ರಾಮೀಣ ಯುವಕ ಯುವತಿಯರು ತಮ್ಮ ಹೆಸರು ಮತ್ತು ವಿಳಾಸಗಳನ್ನು ಆಗಸ್ಟ್ 25ರೊಳಗೆ ನೊಂದಾಯಿಸಿಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಉಚಿತ ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಬ್ಯಾಂಕಿAಗ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಕುರಿತು ಮಾಹಿತಿ ನೀಡಲಾಗುವುದು. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08284-295307, 220807, 9483485489, 9482188780, 8197022501, 9844796998ಗೆ ಸಂಪರ್ಕಿಸಬಹುದು ಎಂದು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಕುರಿ ಸಾಕಾಣಿಕೆ, ನರ್ಸರಿ ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ
