Slide
Slide
Slide
previous arrow
next arrow

ಅಪರೂಪದ ವ್ಯಕ್ತಿತ್ವ ಹೊಂದಿದ್ದ ಎಲ್. ಟಿ. ಶರ್ಮ ಪ್ರಾತಃ ಸ್ಮರಣೀಯ:ಕೇಶವ ಕೊರ್ಸೆ

300x250 AD

ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜನ್ನು ಸ್ಥಾಪನೆ ಮಾಡುವಾಗ ಸಂಸ್ಥಾಪಕರು ಇಟ್ಟ ಕನಸನ್ನು ನನಸು ಮಾಡಿದ ಕೀರ್ತಿ ದಿ.ಪ್ರೊ. ಎಲ್. ಟಿ. ಶರ್ಮ ಅವರಿಗೆ ಸಲ್ಲಬೇಕು. ಶರ್ಮಾ  ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದರು. ಶೈಕ್ಷಣಿಕ ಪ್ರಬುದ್ಧತೆ, ಚಾಕಚಕ್ಯತೆ, ಚಿಂತನಾ ಶಕ್ತಿ, ಸಂಶೋಧನಾ ಪ್ರವೃತ್ತಿಯಿಂದ ಪ್ರಾತಃ ಸ್ಮರಣೀಯ ಎಂದು ಪರಿಸರ ವಿಜ್ಞಾನಿ ಡಾ ಕೇಶವ ಕೊರ್ಸೆ ಹೇಳಿದರು. 

ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಸ್ಥಾಪಕ ಪ್ರಾಚಾರ್ಯ ದಿ. ಎಲ್.ಟಿ.ಶರ್ಮ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. 1983ರಲ್ಲಿ ಅಣೆಕಟ್ಟುಗಳ ಕುರಿತು ದೇಶದ ಮೊದಲ ಕಾರ್ಯಾಗಾರವನ್ನು ವೈಜ್ಞಾನಿಕ ಸಂಶೋಧನೆ ನಡೆಸಿ ಶರ್ಮಾ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಆವರೆಗೆ ಅಣೆಕಟ್ಟುಗಳ ಪರಿಣಾಮ, ದುಷ್ಪರಿಣಾಮಗಳ ಕುರಿತು ವ್ಯಾಪಕ ಚರ್ಚೆ ಆಗಿರಲಿಲ್ಲ. ಇದರಿಂದ ಜನರಲ್ಲಿ ಅಣೆಕಟ್ಟುಗಳು ಪರಿಸರದ ಮೇಲೆ ಬೀರುವ ಪರಿಣಾಮಗಳ ಕುರಿತು  ಹೆಚ್ಚಿನ ಅರಿವು ಮೂಡಿತು.ಇದೇ ಸಂದರ್ಭದಲ್ಲಿ ಎಲ್ ಟಿ ಶರ್ಮ ಅವರು ಮೇಜರ್ ಡಾಮ್ಸ್ ಎನ್ನುವ ಪುಸ್ತಕ ಬರೆದಿದ್ದರು.ಅದು ಇಂದು ಪುನರ್ ಮುದ್ರಣ ಆಗಬೇಕಾದ ಅಗತ್ಯತೆ ಇದೆ. ಸರಕಾರ ಯಾವುದೇ ಯೋಜನೆ ತಂದರೂ ಅದರಿಂದ ಆಗುವ ಲಾಭ ನಷ್ಟದ ಲೆಕ್ಕಾಚಾರ ಹಾಕಿ ತಾಳೆ ನೋಡಿ ತರಬೇಕಾದದ್ದು ಮುಖ್ಯ ಇದನ್ನೆ ಎನ್ವಿರಾನ್ಮೆಂಟ್ ಎಕನಾಮಿಕ್ಸ್ ಎನ್ನುತ್ತಾರೆ. ಆದರೆ ಹಿಂದಿನಿಂದ ಇಂದಿನವರೆಗೂ ಈ ಕುರಿತು ಯಾರೂ ಹೆಚ್ಚು ಗಮನಹರಿಸುತ್ತಿಲ್ಲ ಎಂದರು. 

ನಿವೃತ್ತ ಪ್ರಾಧ್ಯಾಪಕ ಕೆ ವಿ ಭಟ್ ಮಾತನಾಡಿ ಈ ಜಿಲ್ಲೆ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಶರ್ಮಾ ಒಬ್ಬರು. ಬೇಡ್ತಿ ಯೋಜನೆ ತಂದಾಗ ಎಸ್ಆರ್ ಹೆಗಡೆ ಕಡವೆ ಅವರೊಂದಿಗೆ ಸೇರಿ ವೈಜ್ಞಾನಿಕ ಅಧ್ಯಯನದೊಂದಿಗೆ ಚಳುವಳಿ ಆರಂಭಿಸಿದರು. ಉತ್ತರ ಕನ್ನಡದ ಕುರಿತು ಸಮಗ್ರ ಅಧ್ಯಯನ ಮಾಡಿದ ಏಕೈಕ ವ್ಯಕ್ತಿ ಅವರು. ಈ ಕಾಲೇಜಿಗೆ ಕಾರಂತರು,ಬೆಂದ್ರೆಯವರಂತ ಅನೇಕ ಮಹಾನ್ ಸಾಹಿತಿಗಳನ್ನು ಕರೆಸಿ ಉಪನ್ಯಾಸ ಏರ್ಪಡಿಸಿದ್ದರು ಎಂದರು. 

300x250 AD

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪಸಮಿತಿ ಸದಸ್ಯ ಲೋಕೇಶ್ ಹೆಗಡೆ ಮಾತನಾಡಿ ಎಲ್ ಟಿ ಶರ್ಮ ಅವರ ಒಡನಾಡಿಗಳೆಲ್ಲ ಭಾಗ್ಯವಂತರು. ಅಪರೂಪಕ್ಕೆ ಇಂತಹ ವ್ಯಕ್ತಿಗಳು ಹುಟ್ಟಿ ಬರುತ್ತಾರೆ.ಇವರಿಗೆ ಮರಣೊತ್ತರ ಪ್ರಶಸ್ತಿ ನೀಡಲು ಸಂಘ ಸಂಸ್ಥೆಗಳು, ಒಡನಾಡಿಗಳು, ಹಿರಿಯರೆಲ್ಲ ಸೇರಿ ಪ್ರಯತ್ನಿಸಬೇಕು. ಅವರ ವ್ಯಕ್ತಿತ್ವ ಸದಾ ಸ್ಪೂರ್ತಿದಾಯಕ ಎಂದರು.ಉಪಸಮಿತಿ ಸದಸ್ಯ ವಿನಾಯಕ ಹೆಗಡೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಡಾ ಎಸ್ ಎಸ್ ಭಟ್ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರೊ ಎಂ ಎನ್ ಭಟ್ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top