ಸಿದ್ದಾಪುರ: ಇತ್ತೀಚಿನ ದಿನಗಳಲ್ಲಿ ಬಿದಿರು ಭವಿಷ್ಯದ ಬೆಳೆಯಾಗಿ ರೂಪುಗೊಳ್ಳುತ್ತಿದೆ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರು ಬಿದಿರು ಬೆಳೆದು ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿಗಳಾಗಬೇಕೆಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ.ನಾಯ್ಕ ಕಡಕೇರಿ ಹೇಳಿದರು.
ಅವರು ಇಂಡಸ್-ಟ್ರೀ ಫೌಂಡೇಶನ್ ಬೆಂಗಳೂರು ಹಾಗೂ ಕಣಜ ಬಿದಿರು ರೈತ ಉತ್ಪಾದಕ ಸಂಸ್ಥೆ ಸಾಗರ ಇದರ ಆಶ್ರಯದಲ್ಲಿ ಸಾಗರದ ಬಾನ್ಕುಳಿ ಪಂಚಾಯತಿಯ ಬಿಡಸಳ್ಳೆ ಗ್ರಾಮದ ರಮೇಶ್ ಭಟ್ ಇವರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಬಿದಿರು ಸಸಿಗಳನ್ನು ನೆಡುವ ಪ್ರಕ್ರಿಗೆಯೆಗೆ ಚಾಲನೆ ನೀಡುತ್ತಾ ಮಾತನಾಡಿದರು. ಬಿದಿರಿನ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ರೈತರ, ದೇಶದ ಆದಾಯ ಹೆಚ್ಚಿಸುವಲ್ಲಿ ಹಾಗೂ ಪರಿಸರ ಮತೋಲನ ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆಯೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಂಡಸ್-ಟ್ರೀ ಹಾಗೂ ಕಣಜ ಬಿದಿರು ರೈತ ಉತ್ಪಾದಕ ಸಂಸ್ಥೆಯ ಸಸ್ಯ ತಜ್ಞ ಡಾ.ಶ್ರೀಕಾಂತ್ ಗುಣಗಾ ಮಾತನಾಡಿ, ಕಳೆದ ಒಂದು ವರ್ಷದಿಂದ ಸಂಸ್ಥೆಯು ಸಾಗರ-ಹೊಸನಗರ ತಾಲೂಕುಗಳಲ್ಲಿ ಬಿದಿರು ಕೃಷಿಗೆ ಪ್ರೋತ್ಸಾಹಿಸುತ್ತಿದ್ದು ಇದುವರೆಗೆ 275 ರೈತರಿಗೆ 32000 ಟುಲ್ಡಾ ಬಿದಿರು ತಳಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಫಲಾನುಭವಿ ರೈತ ರಮೇಶ್ ಭಟ್ ವಂದಿಸಿದರು.
ಭವಿಷ್ಯದ ಬೆಳೆಯಾಗಿ ರೂಪುಗೊಳ್ಳುತ್ತಿದೆ ಬಿದಿರು: ಎಂ.ಬಿ.ನಾಯ್ಕ
