Slide
Slide
Slide
previous arrow
next arrow

ಕಾಂಗ್ರೆಸ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಬೂತ್ ಸಮಿತಿಗಳ ರಚನೆ

300x250 AD

ಸಿದ್ದಾಪುರ: ತಾಲೂಕಿನಲ್ಲಿ ಕಾಂಗ್ರೆಸ್‌ನಿಂದ ಬೂತ್ ಸಮಿತಿಗಳ ರಚನೆ ನಡೆಯುತ್ತಿದೆ. ತಾಲೂಕಿನ ಹೆಗ್ಗರಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಚಳ್ಳಿ ಬೂತ್‌ನಲ್ಲಿ ಸಂಘಟನೆ ಸಭೆ ನೆಡೆಸಲಾಯಿತು.
ಈ ಸಂದರ್ಭದಲ್ಲಿ ಘಟಕ ಅಧ್ಯಕ್ಷರಾದ ಮಹೇಶ್ ಗೌಡ. ಪಂಚಾಯತ್ ಉಸ್ತುವಾರಿಗಳಾದ ಅಬ್ದುಲ್ ಸಾಬ್ ಹೇರೂರ್. ಪಂಚಾಯತ್ ಸದಸ್ಯ ಬಾರಿ ಸಾಬ್ ಹೆಗ್ಗರಣಿ, ಯಂಕು ಗೌಡ, ಅರುಣ ನಾಯ್ಕ್ ಬಣಗಾರ, ಬೂತ್ ಅಧ್ಯಕ್ಷ ಹರೀಶ್ಚಂದ್ರ ಮುಕ್ರಿ ಇನ್ನು ಅನೇಕ ಕಾರ್ಯಕರ್ತರು ಇದ್ದರು.
ಕಾಂಗ್ರೆಸ್ ಹೆಗ್ಗರಣೆ ಬೂತ್ ಮಟ್ಟದ ಪಕ್ಷ ಸಂಘಟನಾ ಸಭೆಯನ್ನು, ಪಕ್ಷದ ಹೆಗ್ಗರಣೆ ಭಾಗದ ಉಸ್ತುವಾರಿಗಳಾದ ತಾಲೂಕ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಶರೀಫ್ ಸಾಬ್ ಇವರ ಉಪಸ್ಥಿತಿಯಲ್ಲಿ, ಬೂತ್ ಅಧ್ಯಕ್ಷರಾದ ಕಮಲಾಕರ್ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಣಲೆಬೈಲ್ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ್ ಗೌಡ ಮತ್ತು ಪಂಚಾಯತ್ ಸದಸ್ಯರಾದ ಯಂಕ ಗೌಡ ಹಾಗೂ ಹೆಗ್ಗಣೆ ಘಟಕ ಅಧ್ಯಕ್ಷರಾದ ಮಹೇಶ್ ಗೌಡ ಪಂಚಾಯತ್ ಸದಸ್ಯರಾದ ಅಬ್ದುಲ್ ಬಾರಿ ಸಾಬ್ ಹಿರಿಯ ಮುಖಂಡರಾದ ಶೇಖರ ನಾಯ್ಕ, ದೇವೇಂದ್ರ ನಾಯ್ಕ್, ಬಜಲು ಸಾಬ ಮತ್ತು ನಾಗರಾಜ್ ನಾಯ್ಕ, ವಿನಯ್ ಕೊಡಿಯಾ, ಆಶ್ರಫ್ ಸಾಬ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top