ಹಳಿಯಾಳ: ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಸಕ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ದೇಶದ ಏಕತೆಗಾಗಿ ನಡಿಗೆ ಪಾದಯಾತ್ರೆ ಕಾರ್ಯಕ್ರಮ ನಡೆಯಿತು.
ಕೆ.ಕೆ.ಹಳ್ಳಿಯಿಂದ ಆರಂಭವಾದ ಪಾದಯಾತ್ರೆ ಹಳಿಯಾಳದ ಮುಖ್ಯ ಮಾರುಕಟ್ಟೆ ರಸ್ತೆಯ ಮೂಲಕ ಸಾಗಿ, ಕೋಟೆ ಆವರಣದಲ್ಲಿ ಉಪಾಂತ್ಯಗೊಂಡಿತು. ಪಾದಯಾತ್ರೆಯ ಸಂದರ್ಭದಲ್ಲಿ ಸ್ವಾತಂತ್ರ‍್ಯ ಯೋಧರ ತ್ಯಾಗ ಬಲಿದಾನಗಳನ್ನು ದೇಶಪಾಂಡೆ ಸ್ಮರಿಸಿದರು.
ನಡಿಗೆಯಲ್ಲಿ ಕಾಂಗ್ರೆಸ್‌ನ ಹಳಿಯಾಳ ಘಟಕದ ಅಧ್ಯಕ್ಷ ಸುಭಾಷ್ ಕೊರ್ವೇಕರ್, ಪುರಸಭಾ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಉಪಾಧ್ಯಕ್ಷ ಸುವರ್ಣ ಮಾದರ್, ಪುರಸಭಾ ಸದಸ್ಯರಾದ ಫೈಯಾಝ್ ಶೇಖ್ ಹಾಗೂ ಉಮೇಶ್ ಬೊಳಶಟ್ಟಿ, ದಾಂಡೇಲಿ, ಜೊಯಿಡಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ನಾಗರಿಕರೂ ಪಾಲ್ಗೊಂಡಿದ್ದರು.
ಸ್ವಾತಂತ್ರ‍್ಯದ ಅಮೃತ ಮಹೋತ್ಸವ:ದೇಶದ ಏಕತೆಗಾಗಿ ನಡಿಗೆ
