Slide
Slide
Slide
previous arrow
next arrow

ಬಿಜೆಪಿ ಸರ್ಕಾರದಲ್ಲಿ ಮಧ್ಯವರ್ತಿಗಳಿಗೆ ಹಣ ನೀಡುವ ಅಗತ್ಯವಿಲ್ಲ: ದಿನಕರ ಶೆಟ್ಟಿ

300x250 AD

ಹೊನ್ನಾವರ: ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಮಧ್ಯವರ್ತಿಗಳಿಗೆ ಹಣ ನೀಡುವ ಅಗತ್ಯವಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಸಾಲ್ಕೋಡ್, ಮುಗ್ವಾ, ಹೊಸಾಕುಳಿ, ಕಡ್ಲೆ, ಕಡತೋಕಾ, ಚಂದಾವರ ಗ್ರಾಮ ಪಂಚಾಯತಿ ವ್ಯಾಪ್ತಿಯ 2021- 22ನೇ ಸಾಲಿನ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಕಾರ್ಯದೇಶ ವಿತರಣೆ ಮಾಡಿ ಮಾತನಾಡಿದರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಜೆಟ್ ಅನುದಾನದ ಹೊರತಾಗಿ 3 ಲಕ್ಷ ಮನೆಗಳ ಕಾರ್ಯಾದೇಶ ನೀಡಿ ಹಣ ಬಿಡುಗಡೆ ಮಾಡಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಮನೆಗೆ ಹಣ ನೀಡಿತ್ತು. ಇದೀಗ ಮತ್ತೆ ನೂತನ ಮನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಮನೆ ನಿರ್ಮಾಣದ ಸಮಯದಲ್ಲಿ ಅಧಿಕಾರಿಗಳ ಮಾಹಿತಿ ಕೆಲಸ ಆರಂಭಿಸಿ 5 ಹಂತದ ಜಿಪಿಎಸ್ ಫೊಟೊ ಅಗತ್ಯವಿದ್ದು, ಅದನ್ನು ಪಂಚಾಯತಿ ಸಿಬ್ಬಂದಿ ಮಾಡುತ್ತಿದ್ದು, ತೊಂದರೆ ಮಾಡಿದರೆ ನನ್ನ ಗಮನಕ್ಕೆ ತನ್ನಿ ಎಂದು ಫಲಾನುಭವಿಗಳಿಗೆ ತಿಳಿಸಿದರು.
ತಾಲೂಕು ಪಂಚಾಯತಿ ಆಡಳಿತಾಧಿಕಾರಿ ವಿನೋದ ಅಣ್ವೇಕರ್ ಮಾತನಾಡಿ, ಶಾಸಕರು ಪರಿಶ್ರಮ ಬಿಟ್ಟು ಮನೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಧಿಕಾರಿಗಳು ಮನೆ ನಿರ್ಮಾಣದ ಸಮಯದಲ್ಲಿ ಮಾಹಿತಿ ನೀಡುವ ಜೊತೆ ತಮ್ಮ ಕಾರ್ಯವನ್ನು ಸಕಾಲದಲ್ಲಿ ಮಾಡುವಂತೆ ಸೂಚಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ಶಾಸಕರು ಹಲವು ಜನಪರ ಕಾರ್ಯ ಮಾಡುತ್ತಿದ್ದು, ಕ್ಷೇತ್ರದೆಲ್ಲಡೆ ರಸ್ತೆ ಸಮಸ್ಯೆಯನ್ನು ತಮ್ಮ ಅಧಿಕಾರವಧಿಯಲ್ಲಿ ಮಾಡಿದ್ದಾರೆ ಈಗ ಮನೆ ಮಂಜೂರು ಮಾಡಿ ಆದೇಶಪ್ರತಿ ವಿತರಣೆ ಮಾಡಿದ್ದು, ಫಲಾನುಭವಿಗಳು ಕೂಡಲೇ ಮನೆ ನಿರ್ಮಾಣ ನಡೆಸಲು ಆರಂಭಿಸಿ. ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
6 ಗ್ರಾ.ಪಂ. ವ್ಯಾಪ್ತಿಯ 68 ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಕಾರ್ಯಾದೇಶದ ಪ್ರತಿಯಿನ್ನು ಶಾಸಕರು ಇದೇ ವೇಳೆ ಹಸ್ತಾಂತರಿಸಿದರು. ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ತಾಲೂಕಿನ ಸ್ವಸಹಾಯ ಸಂಘದ ಸದಸ್ಯರು ಸಿದ್ಧಪಡಿಸಿದ ತ್ರಿವರ್ಣ ಧ್ವಜವನ್ನು ಶಾಸಕರು ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷರಾದ ರಜನಿ ನಾಯ್ಕ, ಗೋವಿಂದ ಗೌಡ, ಸುರೇಖಾ ನಾಯ್ಕ, ಛಾಯಾ ಉಬಯಕರ್, ಕೃಷ್ಣ ಗೌಡ, ಗೌರಿ ಅಂಬಿಗ, ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top