• Slide
    Slide
    Slide
    previous arrow
    next arrow
  • ಪರಿಸರ ಶುದ್ಧವಾಗಿರಲು ಔಷಧಿ ಗಿಡಗಳನ್ನ ನೆಡಿ: ದೇವರಭಾವಿ

    300x250 AD

    ಅಂಕೋಲಾ: ದೇಶ ಹಾಗೂ ವಿದೇಶಗಳಲ್ಲಿಯೂ ಸಿಗದಂತಹ ಔಷಧಿ ಸಸ್ಯಗಳು ನಮ್ಮ ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ದೊರಕುತ್ತದೆ. ಮನೆಯ ಅಂಗಳದಲ್ಲಿ ಔಷಧಿ ಗಿಡಗಳನ್ನು ನೆಟ್ಟು ಪರಿಸರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ನಾಟಿ ವೈದ್ಯ ಮಧುಕರ ದೇವರಭಾವಿ ಹೇಳಿದರು.

    ಅವರು ಪತಂಜಲಿ ಯೋಗಸಮೀತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನಡೆದ ಜಡಿ ಭೂಟಿ ಕಾರ್ಯಕ್ರಮದಲ್ಲಿ ಔಷಧಿ ಸಸ್ಯಗಳ ಪರಿಚಯ ಹಾಗೂ ಗಿಡಗಳನ್ನು ವಿತರಣೆ ಮಾಡಿ ಮಾತನಾಡಿದರು.

    ಪಂಡಿತ ಆಸ್ಪತ್ರೆಯ ವೈದ್ಯ ಡಾ.ವಿಜಯ ದೀಪ್ ಮಾತನಾಡಿ, ನಮ್ಮಲ್ಲಿ ಬಂದಂತಹ ಅನೇಕ ರೋಗಿಗಳು ಮಧುಮೇಹ, ಬಿಪಿಯಂತಹ ಕಾಯಿಲೆಗಳನ್ನು ತಾವೇ ಗಿಡಮೂಲಿಕೆ ಔಷಧಿ ಸೇವಿಸಿ ಗುಣಮುಖರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಗಿಡಮೂಲಿಕೆ ಔಷಧವು ಪೂರ್ವಜರಿಂದ ಬಂದಂತಹ ಕೊಡುಗೆಯಾಗಿದ್ದು, ಇದನ್ನು ಹೆಚ್ಚಾಗಿ ಉಪಯೋಗಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿ, ಕೆಲವು ಔಷಧಿ ಗಿಡಗಳ ಬಗ್ಗೆ ಪರಿಚಯ ಮಾಡಿದರು.

    300x250 AD

    ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಪತಂಜಲಿ ಯೋಗಸಮಿತಿಯ ಪ್ರಚಾರಕ ವಿನಾಯಕ ಗುಡಿಗಾರ, ಅಭಯ ಮರಬಳ್ಳಿ. ಮಹಿಳಾ ಪ್ರಭಾರಿ ಜೋಸ್ನಾ ನಾರ್ವೇಕರ ಉಪಸ್ಥಿತರಿದ್ದರು. ಸುಧಾ ಶೆಟ್ಟಿ ಸ್ವಾಗತ ಗೀತೆ ಹಾಡಿದರು. ಎಚ್.ಕೆ.ನಾಯ್ಕ ವಂದಿಸಿದರು. ರಾಜು ಹರಿಕಂತ್ರ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ನಾಟಿವೈದ್ಯ ಮಧುಕರ ದೇವರಭವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top