Slide
Slide
Slide
previous arrow
next arrow

ಡಾ.ಮಹಾಂತ ಶಿವಯೋಗಿಯವರ ಜಯಂತಿ ಆಚರಣೆ

300x250 AD

ಸಿದ್ದಾಪುರ: ತಾಲೂಕಾ ಆಡಳಿತದಿಂದ ಡಾ.ಮಹಾಂತ ಶಿವಯೋಗಿಯವರ ಜಯಂತಿಯನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿಯವರು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ತಾಲೂಕಾ ಆಡಳಿತ ಸೌಧದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು. ಹಲಗೇರಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ದಿನೇಶರವರು ಡಾ:ಮಹಾಂತ ಶಿವಯೋಗಿ ರವರ ಕುರಿತು ಉಪನ್ಯಾಸ ನೀಡಿದರು. ತಾಲೂಕ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕರವರು ಮಾದಕ ವಸ್ತುಗಳ ಸೇವನೆಯದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ ನಾಯ್ಕ, ನಾಣಿಕಟ್ಟಾ ಪಿ.ಯು ಕಾಲೇಜ ಪ್ರಾಂಶುಪಾಲರು, ಪಿಎಸ್‌ಐ ಮಹಾಂತೇಶ ಕುಂಬಾರ, ಶಾಲಾ- ಕಾಲೇಜು ವಿದ್ಯಾರ್ಥಿಗಳು, ತಹಶೀಲ್ದಾರ ಕಚೇರಿಯ ಶಿರೆಸ್ತದಾರ ಎನ್.ಐ.ಗೌಡ, ಸಂಗೀತಾ ಭಟ್ ಹಾಗೂ ಸಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.
ಎನ್.ಐ.ಗೌಡ ಸ್ವಾಗತಿಸಿದರು. ರಾಜು ನಾಯ್ಕ ದೈಹಿಕ ಪರೀವೀಕ್ಷಕರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top