ಶಿರಸಿ: “ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ( ಶಿರಸಿ)ವು ರೋಟರಿ ಸಭಾ-ಭವನದಲ್ಲಿ “ಅಂತರಾಷ್ಟ್ರೀಯ ವೈದ್ಯಕೀಯ ಪ್ರತಿನಿಧಿಗಳ ದಿನಾಚರಣೆಯನ್ನು ಆ.1ರಂದು ಅತ್ಯಂತ ಸಂಭ್ರಮದಲ್ಲಿ ಆಚರಿಸಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸದಾನಂದ ನಾಯ್ಕ್ (ABM-EAST-WEST PH.), ರಾಘವೇಂದ್ರ ಶೆಟ್ಟಿ (ABM-ZYDUS CADILA), ಅನಿಲ ನಾಯ್ಕ್, ರವಿ ಪೂಜಾರಿ (ABM-H@H)ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಸಂಘದ ಅಧ್ಯಕ್ಷ ಸಂತೋಷ್ ನಾಯ್ಕ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರಾದ ಪ್ರಶಾಂತ ನಾಯ್ಕ್, ವಿವೇಕ್ ಪೂಜಾರಿ, ಹೇಮಂತ್ ಮಡಿವಾಳ, ಪ್ರದೀಪ್ ಕಬ್ಬರ್, ನಾಗರಾಜ್ ನಾಯ್ಕ್, ರಾಜೀವ್ ನಾಯ್ಕ್, ರೋಷನ್ ಅಮೀನ್, ನುಮಾನ್ ಖಾತಿಬ್, ಶಶಿ ನಾಯ್ಕ್ ಮತ್ತು ವಿವಿಧ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಪ್ರಸನ್ನ ಸೋನಾಪುರ ಮಾಡಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಗುರುದಾಸ್ ಶಾನಭಾಗ್ ಮಾಡಿದರು.
ಅಂತರಾಷ್ಟ್ರೀಯ ವೈದ್ಯಕೀಯ ಪ್ರತಿನಿಧಿಗಳ ದಿನಾಚರಣೆ
