ಭಟ್ಕಳ: ಪಟ್ಟಣದಲ್ಲಿ ಭಾನುವಾರ ಮುಂಜಾನೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಓರ್ವ ಆರೋಪಿ ಜತೆಗೆ ಒಬ್ಬ ಶಂಕಿತನನ್ನು ಬಂಧಿಸುವ ಮುಖೇನ ಶಾಕ್ ನೀಡಿದೆ.
ಪಟ್ಟಣದ ನಿವಾಸಿ ಅಬ್ದುಲ್ ಮುಕ್ತದೀರ್ ಬಂಧಿತ ಆರೋಪಿಯಾಗಿದ್ದು, ಶಂಕಿತನಾದ ಆತನ ಸಹೋದರನನ್ನು ಕೂಡ ವಶಕ್ಕೆ ಪಡೆಯಲಾಗಿದ. ಇವರ ಮನೆಯ ಮೇಲೆ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ ಎನ್‌ಐಎ ತಂಡ ಇವರಿಬ್ಬರನ್ನು ವಶಕ್ಕೆ ಪಡೆದಿದೆ. ISISನ ಸಂಪರ್ಕದಲ್ಲಿರುವ ಹಿನ್ನಲೆಯಲ್ಲಿ ಇವರಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ. ISISನ ಬರಹಗಳನ್ನು ಭಾಷಾಂತರ ಮಾಡುತ್ತಿದ್ದರು ಎನ್ನಲಾಗಿದೆ. ಹಾಗಾಗಿ ಆರೋಪಿತರು ಅವರ ಪತ್ನಿಯ ಮನೆಯಲ್ಲಿರುವಾಗಲೇ ಗುಪ್ತಚರ ಮತ್ತು ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ NIA ದಾಳಿ ನಡೆಸಿದ ಬೆನ್ನಲ್ಲೆ ಭಟ್ಕಳದಲ್ಲೂ ದಾಳಿ ನಡೆಸುವ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆದಿರುವುದು ಭಟ್ಕಳದಲ್ಲಿ ಆತಂಕ ಮೂಡುವಂತಾಗಿದೆ. ಅಲ್ಲದೇ ಈ ವರ್ಷದಲ್ಲಿ ಎನ್‌ಐಎ ಭಟ್ಕಳದಲ್ಲಿ ಎರಡನೇ ಬಾರಿ ದಾಳಿ ನಡೆಸಿದಂತಾಗಿದೆ.