• Slide
    Slide
    Slide
    previous arrow
    next arrow
  • ದರೋಡೆ ಪ್ರಕರಣ: ನಾಲ್ವರು ಆರೋಪಿತರ ಬಂಧನ

    300x250 AD

    ಯಲ್ಲಾಪುರ: ಸ್ನೇಹಿತರೊಂದಿಗೆ ಬೊಮ್ಮನಹಳ್ಳಿ- ಶಿಡ್ಲಗುಂಡಿ ರಸ್ತೆಯಲ್ಲಿ ಹೋಗುತ್ತಿರುವಾಗ ಕಪ್ಪು ಅರಿಶಿನ ವ್ಯಾಪಾರಕ್ಕೆಂದು ಕರೆಸಿಕೊಂಡು ನಾಲ್ಕೈದು ಜನರು ಹಲ್ಲೆ ಮಾಡಿ ನಗದು, ಆಭರಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. 

    ಬಿಳಕಿಯ ಮೊತೇಶ ಸಂತಾನ ಮಸಣ್ಯಾ ಸಿದ್ದಿ ಚಿಕ್ಜಬಿಳ್ಕಿ,ಹುಲಿಯಾ ಲಕ್ಷ್ಮಣ ಸಿದ್ದಿ,ಪ್ರಕಾಶ ಕೃಷ್ಣ ಸಿದ್ದಿ,ಪಿಲೀಪ ಕೃಷ್ಣ ಸಿದ್ದಿ ಬಂಧಿತರಾಗಿದ್ದಾರೆ. ಕಳೆದ ಜೂನ್.14 ರಂದು ಅಂತೋನಿ ದಿವ್ಯಕುಮಾರ ಪ್ರಾನ್ಸಿಸ್ ಫೆರೆರಾ ಹಾಗೂ ಅವರ ಸ್ನೇಹಿತರು ಕಾರಿನಲ್ಲಿ ಹೋಗುತ್ತಿರುವಾಗ ಅವರನ್ನು ಆರೋಪಿತರು ಕಪ್ಪು ಅರಿಶಿಣ ವ್ಯಾಪಾರಕ್ಕೆಂದು ಕರೆಸಿಕೊಂಡು ಹಲ್ಲೆ ನಡೆಸಿದ್ದರು. ಅವರಲ್ಲಿದ್ದ ಹಣ, ಆಭರಣ ಹಾಗೂ ಮೊಬೈಲ್ ಸೇರಿ ಒಟ್ಟು 14.30 ಲಕ್ಷ ರೂ ಮೌಲ್ಯದ ಸ್ವತ್ತನ್ನು ದರೋಡೆ ಮಾಡಿದ್ದರು. 

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲಸ್ಕಂಡ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಬೈಕ್ ಹಾಗೂ ದರೋಡೆ ಮಾಡಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.  

    300x250 AD

    ಎಸ್ ಪಿ ಡಾ.ಸುಮನ ಪನ್ನೇಕರ, ಹೆಚ್ಚುವರಿ ಎಸ್ಪಿ ಎಸ್.ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿಎಸ್ಐ ಅಮಿನಾಸಾಬ್ ಎಂ.ಅತ್ತರ,ಎಎಸ್ಐ ವಿಠಲ್ ಮಾಲವಾಡಕರ್,ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ,ಬಸವರಾಜ ಮಳಗನಕೊಪ್ಪ,ಚನ್ನಕೇಶವ, ಪರಶುರಾಮ,ಅಮರ,ಪರಶುರಾಮ ದೊಡ್ಮನಿ, ನಂದೀಶ, ಸುರೇಶ, ಶೋಭಾ ನಾಯ್ಕ,ಸೀಮಾ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top