Slide
Slide
Slide
previous arrow
next arrow

ಚಿತ್ರಗಿ ಶಾಲೆಗೆ ವಿಜ್ಞಾನ ಪ್ರಯೋಗ ಸಾಮಗ್ರಿ ದೇಣಿಗೆ

300x250 AD

ಕುಮಟಾ: ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀಕೃಷ್ಣ ಅಬ್ಬೆಮನೆ ದೇಣಿಗೆಯಾಗಿ ನೀಡಿದ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಪೂರ್ಣಿಮಾ ಅಬ್ಬೆಮನೆ ಅವರು ಹಸ್ತಾಂತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.

ಪಟ್ಟಣದ ಚಿತ್ರಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಹಸ್ತಾಂತರಿಸಿದ ಶಾಲೆಯ ಹಳೇಯ ವಿದ್ಯಾರ್ಥಿನಿ ಪೂರ್ಣಿಮಾ ಅಬ್ಬೆಮನೆ ಅವರು, ಪ್ರತಿ ಶಿಕ್ಷಕರಿಗೂ ತಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸ್ಥಾನ ಅಲಂಕರಿಸಿ, ತಾವು ಕಲಿತ ಶಾಲೆಗೆ ಸಹಾಯ ಹಸ್ತ ಚಾಚಲಿ ಎಂಬ ಆಶಾಭಾವನೆ ಇರುತ್ತದೆ. ಪ್ರಾಯೋಗಿಕವಾಗಿ ಕಲಿತ ವಿಷಯಗಳು ವಿದ್ಯಾರ್ಥಿಗಳಿಗೆ ಬೇಗ ಅರ್ಥವಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಮುಂದೆ ಇಂಜಿನಿಯರ್, ಡಾಕ್ಟರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಈ ಶಾಲೆಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಭಟ್ಟ ಮಾತನಾಡಿ, ಚಿತ್ರಗಿಯ ಶಾಲೆಗೆ ವಿಜ್ಞಾನ ಪ್ರಯೋಗ ಸಾಮಗ್ರಿಗಳ ಅವಶ್ಯಕತೆ ಕುರಿತು ಈ ಶಾಲೆಯ ಹಳೆಯ ವಿದ್ಯಾರ್ಥಿ ಶ್ರೀಕೃಷ್ಣ ಅಬ್ಬೆಮನೆ ಅವರಲ್ಲಿ ಪ್ರಸ್ತಾಪಿಸಿದಾಗ ತಕ್ಷಣ ಸ್ಪಂದಿಸಿ, ಕಲಿಕೆಗೆ ಅಗತ್ಯವಾದ ಸಾಮಗ್ರಿಗಳನ್ನು ಪೂರೈಸಿದ್ದಾರೆ. ಎಲ್ಲರಲ್ಲಿಯೂ ಹಣವಿರುತ್ತದೆ. ಆದರೆ ಸಹಾಯ ಮಾಡುವ ಮನಸ್ಸು ಇರುವುದಿಲ್ಲ. ಶ್ರೀಕೃಷ್ಣ ಅಬ್ಬೆಮನೆ ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ವಿಜ್ಞಾನ ಪ್ರಯೋಗ ಸಾಮಗ್ರಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ. ಅವರ ಸೇವಾ ಮನೋಭಾವನೆ ಇತರರಿಗೆ ಮಾದರಿ ಎಂದರು.

300x250 AD

ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ವತಿಯಿಂದ ಪೂರ್ಣಿಮಾ ಅಬ್ಬೆಮನೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶತಮಾನೋತ್ಸವ ಆಚರಣಾ ಸಮಿತಿಯ ಆರ್ಥಿಕ ಸಮಿತಿ ಅಧ್ಯಕ್ಷ ಗಣೇಶ ಭಟ್ಟ, ಎಸ್‌ಡಿಎಂಸಿ ಸದಸ್ಯರಾದ ಲಕ್ಷ್ಮಿಕಾಂತ ಪಟಗಾರ, ದೀಪಾ ಕೊಡಿಯಾ, ಮಹೇಶ ಕೋಮಾರಪಂತ, ಶಿಕ್ಷಕರಾದ ಗೌರಿ ಅಂಬಿಗ, ಮಾಲತಿ ನಾಯ್ಕ, ಸಂಧ್ಯಾ ಭಟ್ಟ, ಸುಜಾತಾ ನಾಯ್ಕ, ಪಿ ಟಿ ಪಟಗಾರ ಇತರರಿದ್ದರು.

Share This
300x250 AD
300x250 AD
300x250 AD
Back to top