Slide
Slide
Slide
previous arrow
next arrow

ಮಾರಿಕಾಂಬ ದೇವಿ ಚಿನ್ನದ ಸರ ಕಳ್ಳತನ: ಆರೋಪಿಯ ಬಂಧನ

300x250 AD

ಮುಂಡಗೋಡ: ಮಾರಿಕಾಂಬ ದೇವಿಗೆ ಹಾಕಿದ್ದ 40 ಗ್ರಾಂ ಚಿನ್ನದ ಪದಕ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸನವಳ್ಳಿ ಗ್ರಾಮದ ಮಹಾಂತೇಶ ಆರೇಗೊಪ್ಪ ಎಂದು ಗುರುತಿಸಲಾಗಿದೆ. ಜುಲೈ 26ರ ಬೆಳಗ್ಗೆ ತಾಲೂಕಿನ ಸನವಳ್ಳಿ ಗ್ರಾಮದ ಮಾರಿಕಾಂಬ ದೇವಾಲಯದ ಗರ್ಭಗುಡಿಗೆ ಹಾಕಿದ್ದ ಕೀಲಿಯನ್ನು ಮುರಿದು ದೇವಿಗೆ ಹಾಕಿದ್ದ ಚಿನ್ನದ ಸರ ಕಳ್ಳತನವಾದ ಕುರಿತು ಪೊಲೀಸ್ ಠಾಣೆಯಲ್ಲಿ ಸನವಳ್ಳಿ ಗ್ರಾಮದ ಆನಂದ ಜಮಖಾನವರ ದೂರು ನೀಡಿದ್ದರು.

ಪ್ರಕರಣ ದಾಖಲಸಿಕೊಂಡ ಪೊಲೀಸರು ದೇವಿಯ ಚಿನ್ನಕದ್ದ ಕಳ್ಳನ ಬೇಟೆಗೆ ಜಾಲ ಬೀಸಿದ್ದರು. ಪೊಲೀಸರು ಬೀಸಿದ ಜಾಲದಲ್ಲಿ ಆರೋಪಿಯು ಗುರುವಾರ ಸಿಕ್ಕಿ ಹಾಕಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ದೇವಿಗೆ ಹಾಕಿದ್ದ 40 ಗ್ರಾಂ ಚಿನ್ನದ 2 ಪದಕದ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

300x250 AD

ಆರೋಪಿಯನ್ನು ಬಂಧಿಸುವ ವಿಶೇಷ ತಂಡದಲ್ಲಿ ಎಸ್.ಎಸ್.ಸಿಮಾನಿ, ಪಿಎಸೈಗಳಾದ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ಮಣಿಮಾಲನ್ ಮೇಸ್ತ್ರಿ, ಮಹ್ಮದಸಲೀಂ, ಗಣಪತಿ ಹುನ್ನಳ್ಳಿ, ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವ ಕೊಡಣ್ಣವರ, ಶರತ್ ದೆವಳಿ, ತಿರುಪತಿ ಚೌಡಣ್ಣವರ, ಅರುಣಕುಮಾರ ಬಾಗೇವಾಡಿ, ಮಹಾಂತೇಶ ಭಾಗವಹಿಸಿದ್ದರು. ಇವರೆಲ್ಲರನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top